ಮನೆ ದೇಶ ಕೋವಿಡ್:‌ ದೇಶದಲ್ಲಿ 14,092 ಹೊಸ ಪ್ರಕರಣ ವರದಿ

ಕೋವಿಡ್:‌ ದೇಶದಲ್ಲಿ 14,092 ಹೊಸ ಪ್ರಕರಣ ವರದಿ

0

ನವದೆಹಲಿ (New Delhi): ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 14,092 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 4,42,53,464 ಕ್ಕೆ ತಲುಪಿದೆ.

ಒಂದೇ ದಿನ 41 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 5,27,037 ಕ್ಕೆ ಏರಿದೆ. ಇದರಲ್ಲಿ 12 ಸಾವುಗಳು ಕೇರಳದಿಂದ ವರದಿಯಾಗಿವೆ.

ದೇಶದಲ್ಲಿ 1,16,861 ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಈವರೆಗೆ 2,07,99,63,55 ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಹಿಂದಿನ ಲೇಖನಲೋಕಾ ಅದಾಲತ್‌ : ಮನಸ್ತಾಪ ಮರೆತು ಮತ್ತೆ ಒಂದಾದ ವಿಚ್ಛೇದನ ಬಯಸಿದ ಐದು ದಂಪತಿ
ಮುಂದಿನ ಲೇಖನಆ.28 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸಮಾರಂಭ