ಮನೆ ಅಪರಾಧ ಸ್ಪಾ ಮಾಲೀಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಐವರ ಬಂಧನ

ಸ್ಪಾ ಮಾಲೀಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಐವರ ಬಂಧನ

0

ಬೆಂಗಳೂರು: ರಾಮಮೂರ್ತಿನಗರದ ಸ್ಪಾ ಮಾಲೀಕನಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪತ್ರಕರ್ತ, ನಾಲ್ವರು ಹೋಮ್ ಗಾರ್ಡ್ ಸೇರಿ ಐವರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ಆರ್ ಟಿ ನಗರದ ನಿವಾಸಿ ಸೈಯದ್ ಕಲೀಂ (28), ಸಂಪಂಗಿರಾಮ್ (31), ಆಸಿಫ್ ಬಾಬುಜಾನ್ (27), ಆನಂದ್ ರಾಜ್ (30) ಮತ್ತು ವಿನಾಯಕ (28) ಬಂಧಿತ ಆರೋಪಿಗಳು.

ಆರೋಪಿಗಳು ತಾವೂ ಪೊಲೀಸರು ಎಂದು ಹೇಳಿಕೊಂಡು 1.4 ಲಕ್ಷ ರೂಪಾಯಿ ಸುಲಿಗೆ ಮಾಡಿರುವುದು ತಿಳಿದುಬಂದಿದೆ.

ಫೆಬ್ರವರಿ 26 ರಂದು ಸ್ಪಾ ಮೇಲೆ ದಾಳಿ ನಡೆಸಿದ ತಂಡ ತಾವು ಪೊಲೀಸರೆಂದು ಹೇಳಿತ್ತು, ಸ್ಪಾ ದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಿರೆಂದು ಬೆದರಿಸಿ ಸ್ಪಾ ಮಾಲೀಕರಿಂದ ಹಣ ಸುಲಿಗೆ ಮಾಡಿತ್ತು.

‘ಕಸ್ಟಮ್ ಮತ್ತು ಅಬಕಾರಿ ಸುದ್ದಿ’ ವರದಿಗಾರ ಎಂದು ಹೇಳಿಕೊಂಡ ಪ್ರಮುಖ ಆರೋಪಿ ಕಲೀಂನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ  ತನ್ನ ಸ್ನೇಹಿತರಾದ ಹೋಮ್ ಗಾರ್ಡ್ಸ್ ಗಳ ನೆರವಿನಿಂದ ದಾಳಿ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಸ್ಪಾ ಮಾಲೀಕರನ್ನು ಆನ್‌ಲೈನ್‌ನಲ್ಲಿ ಹಣ  ವರ್ಗಾವಣೆ ಮಾಡುವಂತೆ  ಕಲೀಂ ಒತ್ತಾಯಿಸಿದ್ದ, ಆತನಿಂದ  60,000 ರೂ ನಗದು ಮತ್ತು ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ.  ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಹಿಂದಿನ ಲೇಖನಕೊರೊನಾ: 6561 ಹೊಸ ಪ್ರಕರಣ ಪತ್ತೆ
ಮುಂದಿನ ಲೇಖನಬದಲಾಯಿಸಲಾಗದ ವಿಘಟನೆಯ ಹಿನ್ನೆಲೆಯಲ್ಲಿ ಮದುವೆಯನ್ನು ವಿಸರ್ಜಿಸಲು ಇಬ್ಬರ ಒಪ್ಪಿಗೆ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್