ಮನೆ ರಾಜ್ಯ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-2ರ ನೀರಿನ ಘಟಕ ದುಸ್ಥಿತಿ..!

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-2ರ ನೀರಿನ ಘಟಕ ದುಸ್ಥಿತಿ..!

0

ಮೈಸೂರು : ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕೃಷ್ಣಮೂರ್ತಿಪುರಂ ವಲಯ ಕಚೇರಿ 2 ರಲ್ಲಿರುವ ಶುದ್ಧ ಕುಡಿಯುವ ನೀರು ಘಟಕವು ಹೆಸರಿಗೆ ಮಾತ್ರ ಜನಗಳ ಸೇವೆಗೆ ಸರಿ, ಆದರೆ ಹಲವಾರು ದಿನಗಳಿಂದ ಕಾರ್ಯವಿಲ್ಲದೆ, ಮೌಲ ನಿವಾಸಿಗಳು ಶುದ್ಧ ನೀರಿಗೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಈಗ ಬಿಸಿಲಿನ ತಾಪವು ಹೆಚ್ಚಿದ್ದು ಜನಗಳಿಗೆ ಶುದ್ಧ ಕುಡಿಯುವ ನೀರು ಅತ್ಯವಶ್ಯಕ, ಆದರೆ ಕೃಷ್ಣಮೂರ್ತಿಪುರಂ ವಲಯ ಕಚೇರಿ 2ರ ಶುದ್ಧ ಕುಡಿಯುವ ನೀರು ಘಟಕವು ಕಾರ್ಯ ಪ್ರವೃತ್ತಿ ಇಲ್ಲದ ದೋಸ್ತಿಯಲ್ಲಿದೆ. ಮಹಾನಗರ ಪಾಲಿಕೆಯ ಜನರಿಗೆ ಯಾವ ಸೌಲಭ್ಯಗಳು ಇಲ್ಲ ಎಂದು ಹೇಳಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಪರದಾಟವನ್ನು ನೋಡಿ ಕಣ್ಣು ಮುಚ್ಚಿ ಕೂತಿರುವುದು ವಿಪರ್ಯಾಸವೇ ಸರಿ.
ಜೊತೆಗೆ ಅಲ್ಲಿನ ಮಣ್ಣಿನ ದೂಳು, ಕಸದ ರಾಶಿಗಳು, ವಾರದಿಂದ ಹದಗೆಟ್ಟಿರುವ ನೀರಿನ ಘಟಕ, ಇದನ್ನು ನೋಡಿ ಸ್ಥಳೀಯರು ಅಲ್ಲಿನ ಧೂಳು ಕುಡಿಯುವ ಪರಿಸ್ಥಿತಿ ಎದುರಾಗಿದ್ದು, ಇದರ ಬಗ್ಗೆ ಮಹಾನಗರ ಪಾಲಿಕೆಯವರು ಶೀಘ್ರ, ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.