ಬೆಂಗಳೂರು : ವಾರಕ್ಕೆ 75 ಗಂಟೆಗಗಳ ಕಾಲ ಕೆಲಸ ಮಾಡಬೇಕು ಎಂದಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ವಿರುದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ವೇಳೆ ಕೆಲಸ ಅವಧಿ ಪ್ರಸ್ತಾಪಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಅಂದ್ರು. ಆದ್ರೆ, ಆಯಮ್ಮ ಯಾರೋ ಸಿಂಪಲ್ ಸುಧಾ ಅಂತೆ ನನಗೆ ಗೊತ್ತಿಲ್ಲ, ಆಯಮ್ಮನ ಗಂಡ ಪತಿ ವಾರಕ್ಕೆ 75 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು ಅಂದ್ರೆ ನಾವೇನು ಪ್ರಾಣಿಗಳಾ? ಎಂದು ನಾರಾಯಣ ಮೂರ್ತಿ ವಿರುದ್ಧ ಕಿಡಿಕಾರಿದ್ದಾರೆ.
ನಾವು ಮನುಷ್ಯರು. ನಾವು ಕೆಲಸ ಮಾಡಿಲ್ಲ ಅಂದ್ರೆ ಮಾಲೀಕರು ಅಲ್ಲ. ಮಾಲೀಕ ಕೆಲಸ ಕೊಡಬಹುದು, ನಾವು ಕೆಲಸ ಮಾಡಿದ್ರೇನೆ ಮಾಲೀಕ. ಎಲ್ಲಾ ಒಟ್ಟಿಗೆ ನಡೆಯಬೇಕು. ಸ್ವಾಭಿಮಾನ, ನಿಮ್ಮ ಹಕ್ಕು, ಸಮಾನತೆಗೆ ಹೋರಾಟ ಮಾಡಬೇಕು ಎಂದರು.















