ಮನೆ ರಾಜ್ಯ ಸಹಾಯ ಮನೋಭಾವ ಬೆಳೆಸಿಕೊಳ್ಳಿ: ಡಿ ಟಿ ಪ್ರಕಾಶ್

ಸಹಾಯ ಮನೋಭಾವ ಬೆಳೆಸಿಕೊಳ್ಳಿ: ಡಿ ಟಿ ಪ್ರಕಾಶ್

0

ಮೈಸೂರು(Mysuru): ಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಮಾಡುವ, ಸಮಾಜದ ಎಲ್ಲರನ್ನೂ ಸಮಾನತೆಯಿಂದ ನೋಡುವ ಮುಂತಾದ ಗುಣಗಳ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್   ತಿಳಿಸಿದರು.

ಅಗ್ರಹಾರದ ಉತ್ತರಾದಿ ಮಠದಲ್ಲಿ  ಶ್ರೀ ಗುರು ರಾಘವೇಂದ್ರ ಟ್ರಸ್ಟ್ ಆಯೋಜಿಸಿದ ಜಯತೀರ್ಥರ ಆರಾಧನಾ ಮಹೋತ್ಸವ  ಹಮ್ಮಿಕೊಂಡಿದು ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ   ಆಧ್ಯಾತ್ಮಿಕ ಭಾಗವತ ಸಪ್ತಾಹದಲ್ಲಿ ಮಾತನಾಡಿದರು.

ನೂರಾರು ವರ್ಷಗಳಿ೦ದಲೂ  ಮನುಷ್ಯ ಜನ್ಮಪಡೆಯುವುದು ಬದುಕಿನ ಸಾರ್ಥಕತೆ ಭಾಗವೆನ್ನಲಾಗಿದೆ. ಭಗವಂತನು ಕೊಟ್ಟ ವರಪ್ರಸಾದ ಹುಟ್ಟಿದ ಪ್ರತಿಯೊಬ್ಬ ಸಾರ್ಥಕಪಡಿಸಿಕೊಳ್ಳಬೇಕು. ದೇವರ ಪೂಜೆ, ಧಾರ್ಮಿಕ ಕಾರ್ಯಕ್ರಮ, ಹವನ, ಹೋಮ, ಆಧ್ಯಾತ್ಮಿಕ ಚಿ೦ತನೆ, ಸಾಮಾಜಿಕ ಸೇವಾಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು, ನಮ್ಮೆಲ್ಲರ ಬದುಕಿಗೆ ಹೆಚ್ಚು ಚೈತನ್ಯ ತುಂಬುವ ಶಕ್ತಿ ಆಧ್ಯಾತ್ಮಿಕ ಚಿಂತನೆಯಾಗಿದೆ  ಎಂದರು

ನಂತರ ಮಾತನಾಡಿ ಉತ್ತರಾದಿ ಮಠದ ಮಠಾಧಿಕಾರಿ ಪಂಡಿತ್ ಅನಿರುದ್ಧ್ ಆಚಾರ್ , ಟೀಕಾಚಾರ್ಯ ಎಂದೇ ಖ್ಯಾತರಾಗಿರುವ ಜಯತೀರ್ಥರು ಹಿಂದೂ ದಾರ್ಶನಿಕ, ಆಡುನುಡಿ, ವಿಚಾರವಾದಿ ಹಾಗೂ ಮಧ್ವಾಚಾರ್ಯ ಪೀಠದ ಆರನೇ ಮುಖ್ಯಸ್ಥರಾಗಿದ್ದರು. ಮಧ್ವಾಚಾರ್ಯರ ಕೃತಿಗಳ ಸ್ಪಷ್ಟವಾದ ಸ್ಪಷ್ಟಿಕರಣದ ಕಾರಣದಿಂದ ಅವರು ದ್ವೈತ  ಚಿಂತನೆಯ ಪ್ರಮುಖ ದಾರ್ಶನಿಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ದ್ವೈತ  ತತ್ವವನ್ನು ಇಡೀ ದೇಶ ಸುತ್ತಿ ಪ್ರಚಾರ ಮಾಡಿದ ಅವರು, ತತ್ವಶಾಸ್ತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಸುಮಾರು 600 ವರ್ಷಗಳ ಹಿಂದೆ ಜಯತೀರ್ಥರು ಕಲಬುರಗಿ ಜಿಲ್ಲೆಯ ಮಳಖೇಡಕ್ಕೆ ಬಂದು ಗ್ರಾಮದ ಕಾಗಿಣಾ ನದಿ ಬಳಿ ಸಮಾಧಿಯಾಗಿದ್ದಾರೆ. ಅಂದಿನಿಂದ ಅವರ ಬೃಂದಾವನವು ಪವಿತ್ರ ಸ್ಥಳವಾಗಿದೆ. ಅಲ್ಲಿ ನಡೆಯುವ ಆರಾಧನೆಯಲ್ಲಿ ದೇಶಾದ್ಯಂತ ಲಕ್ಷಾಂತರ ಭಕ್ತರು ಬಂದು ಭಾಗವಹಿಸುತ್ತಾರೆ ಎಂದು ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಉತ್ತರಾದಿ ಮಠದ ಮಠಾಧಿಕಾರಿ ಪಂಡಿತ್ ಅನಿರುದ್ಧ್ ಆಚಾರ್ , ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ , ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷರಾದ ಸುಬ್ರಹ್ಮಣ್ಯ ತಂತ್ರಿ, ಶ್ರೀ ಗುರು ರಾಘವೇಂದ್ರ ಟ್ರಸ್ಟ್ ಅಧ್ಯಕ್ಷ ಎಸ್ ಬಿ ವಾಸುದೇವ ಮೂರ್ತಿ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ , ರಂಗನಾಥ್ , ವಿಜಯ ವಿಠಲ ಆಚಾರ್ಯ, ವಿದ್ವಾನ್ ಗೋವಿಂದಾಚಾರ್  ಹಾಜರಿದ್ದರು.

ಹಿಂದಿನ ಲೇಖನಹಂದಿ ಅಣ್ಣಿ ಹತ್ಯೆ ಪ್ರಕರಣ: ಎಸ್ಪಿ ಮುಂದೆ ಶರಣಾದ ಆರೋಪಿಗಳು
ಮುಂದಿನ ಲೇಖನಇಂದು ಸುಪ್ರೀಂಕೋರ್ಟ್ ನಲ್ಲಿ ಅಗ್ನಿಪಥ್ ನೇಮಕಾತಿ ಯೋಜನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ