ಮನೆ ಸುದ್ದಿ ಜಾಲ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ – 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ..!

ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ – 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ..!

0

ಬೆಂಗಳೂರು : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಶೇ.94.10 ಫಲಿತಾಂಶ ಬಂದಿದ್ದು, 98.40% ಉತ್ತೀರ್ಣ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ‌ ಸ್ಥಾನ ಪಡೆದಿದೆ.

ಕಳೆದ ಬಾರಿ 94.41% ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿತ್ತು. ಇನ್ನೂ ಕಳೆದ ಬಾರಿ 93.94% ಫಲಿತಾಂಶ ಪಡೆದಿದ್ದ ಉಡುಪಿ ಜಿಲ್ಲೆ ಈ ಬಾರಿ 98.18% ಪಡೆದು ರಾಜ್ಯಕ್ಕೆ 2ನೇ ಸ್ಥಾನ ಪಡೆದರೇ, 98.09% ಫಲಿತಾಂಶ ಪಡೆದ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ. 2024-2025 ರಲ್ಲಿ 56.89 ಫಲಿತಾಂಶ ಪಡೆದಿದ್ದ ಕಲಬುರಗಿ ಈ ಬಾರಿ 85.06% ಫಲಿತಾಂಶದೊಂದಿಗೆ ಕೊನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಇನ್ನೂ ಬಾರಿ ಉತ್ತೀರ್ಣ ಅಂಕ 33ಕ್ಕೆ ಇಳಿಸಲಾಗಿತ್ತಾದ್ರೂ, 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. 21 ವಿದ್ಯಾರ್ಥಿಗಳು 624 ಅಂಕ, 28 ವಿದ್ಯಾರ್ಥಿಗಳು 623 ಅಂಕ, 74 ವಿದ್ಯಾರ್ಥಿಗಳು 622 ಅಂಕ, 98 ವಿದ್ಯಾರ್ಥಿಗಳು 621 ಅಂಕ ಹಾಗೂ 150 ವಿದ್ಯಾರ್ಥಿಗಳು 620 ಅಂಕಗಳನ್ನ ಪಡೆದುಕೊಂದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.