ಮನೆ ಸುದ್ದಿ ಜಾಲ ಮೈಸೂರು ವಿವಿಯ ಖಾಯಂ ಬೋಧಕ ಹುದ್ದೆಗಳ ನೇಮಕಾತಿಗೆ ಕ್ರಮಕ್ಕೆ ತೀರ್ಮಾನ

ಮೈಸೂರು ವಿವಿಯ ಖಾಯಂ ಬೋಧಕ ಹುದ್ದೆಗಳ ನೇಮಕಾತಿಗೆ ಕ್ರಮಕ್ಕೆ ತೀರ್ಮಾನ

0

ಮೈಸೂರು (Mysuru)- ಮೈಸೂರು ವಿಶ್ವವಿದ್ಯಾನಿಲಯದಲ್ಲಿ (Mysuru University) ಶೈಕ್ಷಣಿಕ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಖಾಯಂ ಬೋಧಕ ಹುದ್ದೆಗಳ ನೇಮಕಾತಿಯನ್ನು ಸರ್ಕಾರದ ಅನುಮೋದನೆಯೊಂದಿಗೆ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಕ್ರಾಫರ್ಡ್ ಭವನದ ವಿದ್ಯಾವಿಷಯಕ ಪರಿಷತ್ತಿನ ಸಭಾಂಗಣದಲ್ಲಿ ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿ (ಪಿಎಂಇಐ) ಸಭೆ ನಡೆಯಿತು. ಇಲ್ಲಿ ವಿಶ್ವವಿದ್ಯಾನಿಲಯದ ಸರ್ವಾಂಗೀಣ ಅಭಿವೃದ್ಧಿಯ ಕುರಿತಂತೆ ಚರ್ಚಿಸಲಾಯಿತು.

ಉನ್ನತ ಶಿಕ್ಷಣದ ಭಾಗವಾಗಿ ಪ್ರಾಯೋಜಿತ ಸಂಸ್ಥೆಗಳ ನೆರವಿನೊಂದಿಗೆ ಸಂಶೋಧನಾ ಯೋಜನೆಗಳನ್ನು ಹೆಚ್ಚು ಹೆಚ್ಚಾಗಿ ಕೈಗೊಳ್ಳಲು ಸಹ ತೀರ್ಮಾನಿಸಲಾಯಿತು. ಹಾಗೆಯೇ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನೂತನ ಶಿಕ್ಷಣ ನೀತಿ 2020 ಅನ್ನು ಅನುಷ್ಠಾನಗೊಳಿಸಿರುವುದನ್ನು ಸಭೆಯು ಮುಕ್ತವಾಗಿ ಶ್ಲಾಘಿಸಿತ್ತು. ಕೆರಿಯರ್ ಹಬ್ ಕೇಂದ್ರದ ಸ್ಥಾಪನೆಯ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಸಭೆಯಲ್ಲಿ ಸರ್ಕಾರದಿಂದ ನಾಮನಿರ್ದೇಶಿತಗೊಂಡ ಸದಸ್ಯರಾದ ಡಾ.ಕೆ. ಮಹದೇವ. ಪ್ರೊ. ಎಂ.ಕೆ, ಸೂರಪ್ಪ ಮತ್ತು ಡಾ. ಡಿ. ಸುಧನ್ವ ಹಾಗೂ ನಿಕಾಯದ ಡೀನರು ಹಾಗೂ ಹಿರಿಯ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು.

ಹಿಂದಿನ ಲೇಖನಸನ್ಯಾಸ ದೀಕ್ಷೆ ಸ್ವೀಕರಿಸಿದ ಮಾಜಿ ಸಚಿವರಾದ ಶ್ರೀ ಬಿ.ಜೆ.ಪುಟ್ಟಸ್ವಾಮಿಯವರು
ಮುಂದಿನ ಲೇಖನಮೇ ೮ ರಂದು ವಿಶ್ವನಾಥ್ ೭೫ರ ಸಂಭ್ರಮ: ಕಾರ್ಯಕ್ರಮ