ಮನೆ ರಾಷ್ಟ್ರೀಯ ದೆಹಲಿ ಅಬಕಾರಿ ನೀತಿ ಹಗರಣ: ಪಂಜಾಬ್ ಮೂಲದ ಉದ್ಯಮಿಯನ್ನು ಬಂಧಿಸಿದ ಇಡಿ

ದೆಹಲಿ ಅಬಕಾರಿ ನೀತಿ ಹಗರಣ: ಪಂಜಾಬ್ ಮೂಲದ ಉದ್ಯಮಿಯನ್ನು ಬಂಧಿಸಿದ ಇಡಿ

0

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಂಜಾಬ್ ಮೂಲದ ಉದ್ಯಮಿ ಗೌತಮ್ ಮಲ್ಹೋತ್ರಾನನ್ನು ಬಂಧಿಸಿದೆ.

ಪಂಜಾಬ್‌’ನ ಓಯಸಿಸ್ ಸಮೂಹದ ಜತೆ ನಂಟು ಹೊಂದಿರುವ ಮಲ್ಹೋತ್ರಾನನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್’ಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಪಂಜಾಬ್ ಹಾಗೂ ಇತರೆ ಪ್ರದೇಶಗಳಲ್ಲಿ ಮದ್ಯ ಅಕ್ರಮ ವ್ಯವಹಾರದಲ್ಲಿ ಮಲ್ಹೋತ್ರಾ ಭಾಗಿಯಾಗಿದ್ದಾನೆ ಎಂದು ಹೇಳಿದ್ದಾರೆ.

ಮಲ್ಹೋತ್ರಾನನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಇ.ಡಿ ಕೋರಲಿದೆ.

ಹಿಂದಿನ ಲೇಖನಪಂಜಾಬ್ ಗಡಿಯೊಳಗೆ ನುಸುಳಿದ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್’ಎಫ್
ಮುಂದಿನ ಲೇಖನಟರ್ಕಿ ಭೂಕಂಪ: ಕನ್ನಡಿಗರ ರಕ್ಷಣೆಗೆ ಹೆಲ್ಪ್ ಲೈನ್ ಪ್ರಾರಂಭ- ಸಿಎಂ ಬೊಮ್ಮಾಯಿ