ಮನೆ ರಾಜಕೀಯ ಹಿಜಾಬ್ ವಿವಾದದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿರುವ ವಿಪಕ್ಷಗಳು: ಸಿಎಂ ವಾಗ್ದಾಳಿ

ಹಿಜಾಬ್ ವಿವಾದದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿರುವ ವಿಪಕ್ಷಗಳು: ಸಿಎಂ ವಾಗ್ದಾಳಿ

0

ಬೆಂಗಳೂರು: ಹಿಜಾಬ್ ವಿಚಾರದಲ್ಲಿ ವಿಪಕ್ಷಗಳು ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಕಾಂಗ್ರೆಸ್ ರಾಜಕೀಯ ಲಾಭ ಪ್ರತಿಷ್ಟೆಗಾಗಿ ಪ್ರತಿಭಟನೆ ನಡೆಸುತ್ತಿದೆ.  ವಿಪಕ್ಷ ತನ್ನ ಜವಾಬ್ದಾರಿ ಮರೆತಿದೆ.  ಇದು ಕಾಂಗ್ರೆಸ್ ರಾಜಕೀಯ ದಿವಾಳಿತನ. ಶಾಲಾ ಕಾಲೇಜುಗಳಲ್ಲಿ ಕೆಲ  ಬೆಳವಣಿಗೆ ನಡೆದಿವೆ.  ಹೈಕೋರ್ಟ್ ಮಧ್ಯಾಂತರ ತೀರ್ಪು ನೀಡಿದೆ. ಈ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕೇಸರಿ ಧ್ವಜ ಹಾರಿಸಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಲ್ಲ. ಆದರೂ ಕಲಾಪಕ್ಕೆ ಅಡ್ಡಿಪಡಿಸವುದು ಸರಿಯಲ್ಲ.  ರಾಜ್ಯದ ಜನ ರೈತರಿಗಾಗಿ ಕಾಂಗ್ರೆಸ್  ಪ್ರತಿಭಟನೆ ನಡೆಸುತ್ತಿಲ್ಲ ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಹಿಂದಿನ ಲೇಖನಅಪರೂಪದ ತಾಳೆಗರಿ ಸಂರಕ್ಷಣೆ: ಮೈಸೂರು ವಿವಿ, ದಿ ಮಿಥಿಕ್ ಸೊಸೈಟಿಯೊಂದಿಗೆ ಒಡಂಬಡಿಕೆ
ಮುಂದಿನ ಲೇಖನಅಂಬೇಡ್ಕರ್‌ಗೆ ಅಪಮಾನ ಪ್ರಕರಣ: ರಾಯಚೂರು ನ್ಯಾಯಾಧೀಶರ ವರ್ಗಾವಣೆ