ಮನೆ ಕ್ರೀಡೆ WTC Final 2023: ಒಂದೇ ರೀತಿಯ ಅಪರೂಪದ ದಾಖಲೆ ಬರೆದ ರೋಹಿತ್, ಕಮ್ಮಿನ್ಸ್..!

WTC Final 2023: ಒಂದೇ ರೀತಿಯ ಅಪರೂಪದ ದಾಖಲೆ ಬರೆದ ರೋಹಿತ್, ಕಮ್ಮಿನ್ಸ್..!

0

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅಪರೂಪಕ್ಕೆ ಕಾಣಸಿಗುವ ದಾಖಲೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ನ ಫೈನಲ್‌ ಸಾಕ್ಷಿಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯ ನಡುವೆ ಇಂದಿನಿಂದ ಅಂದರೆ ಜೂನ್ 7 ರಿಂದ ಆರಂಭವಾಗಿರುವ ಟೆಸ್ಟ್ ವಿಶ್ವಕಪ್​ ನಲ್ಲಿ ಕಣಕ್ಕಿಳಿಯುವ ಮೂಲಕ ಉಭಯ ತಂಡದ ನಾಯಕರು ಒಟ್ಟಾಗಿ ಅರ್ಧಶತಕ ಪೂರೈಸಿದ್ದಾರೆ.

Join Our Whatsapp Group

ಅಂದರೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್ ಪಂದ್ಯವು ಎರಡೂ ತಂಡಗಳ ನಾಯಕರಾದ ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ಟೆಸ್ಟ್ ವೃತ್ತಿಜೀವನದ 50 ನೇ ಟೆಸ್ಟ್ ಪಂದ್ಯವಾಗಿದೆ. ಇದೀಗ ಈ ಇಬ್ಬರೂ ನಾಯಕರು WTC ಫೈನಲ್‌ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವ ಮೂಲಕ ತಮ್ಮ 50 ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಲಿದ್ದಾರೆ.

ರೋಹಿತ್, ಕಮಿನ್ಸ್ ಟೆಸ್ಟ್ ದಾಖಲೆ

ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಇದುವರೆಗೆ ಆಡಿರುವ 49 ಟೆಸ್ಟ್‌ ಗಳಲ್ಲಿ 217 ವಿಕೆಟ್‌ ಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಬ್ಯಾಟ್‌ ನಿಂದ 924 ರನ್ ಕಲೆಹಾಕಿದ್ದಾರೆ. ಮತ್ತೊಂದೆಡೆ, ರೋಹಿತ್ ಶರ್ಮಾ 49 ಟೆಸ್ಟ್ ಪಂದ್ಯಗಳಲ್ಲಿ 3379 ರನ್ ಸಿಡಿಸಿದ್ದಾರೆ ಮತ್ತು ಬೌಲಿಂಗ್​ ನಲ್ಲಿ 2 ವಿಕೆಟ್ ಪಡೆದಿದ್ದಾರೆ. ರೋಹಿತ್ ಶರ್ಮಾ ಈ 49 ಟೆಸ್ಟ್ ಪಂದ್ಯಗಳಲ್ಲಿ 1 ದ್ವಿಶತಕ, 9 ಶತಕ ಮತ್ತು 14 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

ರೋಹಿತ್-ಕಮ್ಮಿನ್ಸ್ ನಾಯಕತ್ವದ ಅಂಕಿಅಂಶಗಳು ಏನು ಹೇಳುತ್ತವೆ?

ಆದರೆ, ಈಗ 50ನೇ ಟೆಸ್ಟ್‌ ನಲ್ಲಿ ತಮ್ಮ ತಂಡಗಳನ್ನು ಗೆಲ್ಲಿಸುವ ಸವಾಲು ಉಭಯ ನಾಯಕರ ಮುಂದಿದೆ. ರೋಹಿತ್‌ಗಿಂತ ಕಮ್ಮಿನ್ಸ್‌ಗೆ ಅನುಭವವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ರೋಹಿತ್ ಇದುವರೆಗೆ ನಾಯಕತ್ವ ವಹಿಸಿರುವ ಎಲ್ಲಾ ಟೆಸ್ಟ್‌ ಗಳಲ್ಲಿ ಅವರ ದಾಖಲೆ ಅದ್ಭುತವಾಗಿದೆ.

ರೋಹಿತ್ ಶರ್ಮಾ ಇದುವರೆಗೆ 6 ಟೆಸ್ಟ್ ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದು, ಅದರಲ್ಲಿ 4 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯದಲ್ಲಿ ಸೋತು, 1 ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ಪ್ಯಾಟ್ ಕಮ್ಮಿನ್ಸ್ ಇದುವರೆಗೆ 15 ಟೆಸ್ಟ್‌ ಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದು, ಅದರಲ್ಲಿ 8 ಗೆಲುವು, 3 ಸೋಲು ಮತ್ತು 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.

ಹಿಂದಿನ ಲೇಖನ14 ಖಾರಿಫ್‌ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ ಕೇಂದ್ರ
ಮುಂದಿನ ಲೇಖನಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ