ಪಾರ್ವತಿಪುತ್ರ ಪಾವನಗಾತ್ರ
ಪೂತಚರಿತ್ರ ಪಾಲಯಮಾಂ ||ಪಾರ್ವತಿ||
ಸುಖ ದುಖಃಗಳಲಿ ಸಖ ನೀನಾಗಿರು||೨||
ಕರಿಮುಖ ಸುಮುಖ ಪಾಲಯಮಾಂ ||ಪಾರ್ವತಿಪುತ್ರ||
ಪುರುಷಾರ್ಥಗಳನು ಹರುಷದಿ ಕರುಣಿಪ
ಹೇ ವೈಷ್ಣವಾಗ್ರಣಿ ಪಾಲಯಮಾಂ||
ಅರಿಷಢ್ವರ್ಗದ ಪರಿತಾಪ ಕಳೆಯೋ
ಹರಸುತ ಗಣಪ ಪಾಲಯಮಾಂ ||ಪಾರ್ವತಿ||
ಧರ್ಮದಿ ನಡೆಸೈ ನಿರ್ಮಲ ಚರಿತ
ಕರ್ಮಜದೈವ ಪಾಲಯಮಾಂ ||
ಜ್ಞಾನ ಭಕುತಿಯು ನಿನ್ನಾಧೀನವು
ಪಾರ್ವತಿಪುತ್ರ ಪಾಲಯಮಾಂ ||ಪಾರ್ವತಿ||