ಮನೆ ಯೋಗಾಸನ ಬೆಳ್ಳಂಬೆಳಗ್ಗೆ ಪ್ರತಿಯೊಬ್ಬರೂ ಮಾಡಲೇಬೇಕಾದ ಯೋಗಗಳಿವು!

ಬೆಳ್ಳಂಬೆಳಗ್ಗೆ ಪ್ರತಿಯೊಬ್ಬರೂ ಮಾಡಲೇಬೇಕಾದ ಯೋಗಗಳಿವು!

0

ಯೋಗಾಭ್ಯಾಸದ ಪರಿಣಾಮದಿಂದ ನಮ್ಮ ಆರೋಗ್ಯದಲ್ಲಿ ಮತ್ತು ದೈಹಿಕ ಸದೃಢತೆಗೆ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ವ್ಯಾಯಾಮದಂತೆ ಇದನ್ನು ಮಾಡಲು ಯಾವುದೇ ಉಪಕರಣಗಳು ಅವಶ್ಯಕತೆ ಇಲ್ಲದೆ ಇರುವುದರಿಂದ ನಿಮಗೆ ಯೋಗಾಭ್ಯಾಸ ಮಾಡಲು ಬೇಕಾಗಿರುವುದು ನಿಮ್ಮ ಗಟ್ಟಿಯಾದ ಮನಸ್ಸು ಮತ್ತು ಪ್ರಶಾಂತವಾದ ಸ್ಥಳ.

Join Our Whatsapp Group

ಆರಂಭದಲ್ಲಿ ಯೋಗಾಭ್ಯಾಸ ಮಾಡಲು ಸ್ವಲ್ಪ ಕಷ್ಟ ಎನಿಸಿದರೂ ಸಹ ಅಭ್ಯಾಸವಾದ ನಂತರ ಇದರಿಂದ ನಿಮಗೆ ಬಹಳಷ್ಟು ಅನುಕೂಲತೆಗಳು ಸಿಗುತ್ತವೆ ಮತ್ತು ನೀವು ಮತ್ತೊಬ್ಬರಿಗೆ ಯೋಗಾಭ್ಯಾಸದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸಕ್ಕೆ ಮುಂದಾಗುವಂತೆ ಮಾಡುತ್ತದೆ.

ಧ್ಯಾನ ಮಾಡುವುದು, ದೇವರ ಮಂತ್ರ ಹೇಳುವುದು, ಯೋಗಾಭ್ಯಾಸ ಮಾಡುವುದು ಎಲ್ಲವೂ ಸಹ ಹೆಚ್ಚು ಕಡಿಮೆ ಒಂದೇ ಬಗೆಯ ಆರೋಗ್ಯ ಸುಧಾರಕ ವಿಧಾನಗಳು ಎಂದು ಹೇಳಬಹುದು. ಯೋಗಾಭ್ಯಾಸವನ್ನು ಮಾಡಲು ಇಂತಹದೇ ಸಮಯ ಎಂಬ ನಿಯಮವಿಲ್ಲ.

ಆದರೂ ಸಹ ಬಹುತೇಕ ಜನರು ಬೆಳಗಿನ ಸಮಯದಲ್ಲಿ ಯೋಗಾಭ್ಯಾಸ ಮಾಡುವ ಇಂಗಿತ ವ್ಯಕ್ತಪಡಿಸುತ್ತಾರೆ. ಇದರಿಂದ ಸಾಕಷ್ಟು ಅನುಕೂಲತೆ ಕೂಡ ಇದೆ. ಇಡೀದಿನ ಯಾವುದೇ ಒತ್ತಡ ಬಂದರೂ ಸಹ ಅದನ್ನು ಸುಲಭವಾಗಿ ನಿರ್ವಹಣೆ ಮಾಡುವ ಗುಣಸ್ವಭಾವ ಪ್ರತಿಯೊಬ್ಬರಿಗೂ ಬರುತ್ತದೆ. ಹಾಗಾದರೆ ಬೆಳ್ಳಂಬೆಳಗ್ಗೆ ಮಾಡುವಂತಹ ಯೋಗಾಭ್ಯಾಸಗಳು ಯಾವುವು ಮತ್ತು ಅವುಗಳಿಂದ ಆಗುವ ಆರೋಗ್ಯದ ಉಪಯೋಗಗಳು ಏನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ

ಅಧೋಮುಖ ಶ್ವಾನಾಸನ

ಈ ಯೋಗಾಭ್ಯಾಸವನ್ನು ಮಾಡುವ ಮುಖ್ಯ ಉದ್ದೇಶ ಎಂದರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುವುದು. ಇದರಲ್ಲಿ ಮುಖ್ಯವಾಗಿ ನಿಮ್ಮ ಕೈಗಳನ್ನು, ಭುಜವನ್ನು ವಿಸ್ತಾರ ಮಾಡುವ ಅವಕಾಶ ಸಿಗುತ್ತದೆ. ಇದರಿಂದ ದೇಹದ ಅಂಗಾಂಗಗಳು ಸಹ ಸದೃಢವಾಗುತ್ತವೆ.

ಅದೋಮುಖ ಶವಾಸನ ಮಾಡುವ ಬಗೆ ಹೇಗೆ?

1. ಮೊದಲು ನೆಲದ ಮೇಲೆ ನಿಮ್ಮ ಎರಡು ಮಂಡಿಗಳ ಮತ್ತು ಕೈಗಳ ಸಹಾಯದಿಂದ ನಿಂತುಕೊಳ್ಳಲು ಪ್ರಯತ್ನಿಸಿ.

2. ನಿಮ್ಮ ಮಂಡಿಗಳು ಮತ್ತು ನಿಮ್ಮ ಎರಡು ಕೈಗಳು ನೆಲವನ್ನು ಮುಟ್ಟಿರಬೇಕು.

3. ಈಗ ನಿಧಾನವಾಗಿ ನಿಮ್ಮ ಎರಡು ಕಾಲುಗಳನ್ನು ನೇರವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ನಿಮ್ಮ ಸೊಂಟದ ಭಾಗವನ್ನು ನಿಧಾನವಾಗಿ ಮೇಲೆತ್ತಿ ನಿಮ್ಮ ಹೆಬ್ಬೆರಳುಗಳ ಮೇಲೆ ನಿಂತುಕೊಳ್ಳಲು ಪ್ರಯತ್ನಿಸಿ.

4. ನಿಮ್ಮ ಬೆನ್ನುಹುರಿಯನ್ನು ನೇರವಾಗಿ ಇರಿಸಿಕೊಳ್ಳುವ ಮೂಲಕ ನಿಮ್ಮ ಎರಡೂ ಕೈಗಳಿಂದ ನೆಲದ ಮೇಲೆ ಒತ್ತಡ ಹಾಕಿ.

5. ಈ ಸಮಯದಲ್ಲಿ ನೀವು ನೋಡಲು ತ್ರಿಭುಜಾಕಾರ ದಲ್ಲಿ ಕಾಣುವಿರಿ.

6. ಈಗ ನಿಮ್ಮ ಸೊಂಟದ ಭಾಗವನ್ನು ಕೆಳಗಿಳಿಸಿ ಮತ್ತೆ ಸಹಜ ಸ್ಥಿತಿಗೆ ಮರಳಿ ಬನ್ನಿ.

7. ಅಧೋಮುಖ ಶ್ವಾನಾಸನ ಮಾಡುವುದು ಹೇಗೆ ಹಾಗೂ ಲಾಭಗಳು

ಭುಜಂಗಾಸನ

ದೈಹಿಕ ಸದೃಢತೆಗೆ ಅನುಕೂಲವಾಗುವ ಇನ್ನೊಂದು ಯೋಗಾಸನ ಎಂದರೆ ಅದು ಭುಜಂಗಾಸನ. ಇದನ್ನು ಕೋಬ್ರಾ ಪೋಸ್ ಎಂದು ಸಹ ಕರೆಯುತ್ತಾರೆ. ಈ ಯೋಗಾಭ್ಯಾಸ ಮಾಡುವುದರಿಂದ ತಲೆಯಿಂದ ಕಾಲಿನ ಬೆರಳುಗಳವರೆಗೆ ಇಡೀ ದೇಹ ಸದೃಢವಾಗುತ್ತದೆ.

ಭುಜಂಗಾಸನ ಮಾಡುವ ರೀತಿ

1. ಮೊದಲು ನೆಲದ ಮೇಲೆ ಬೋರಲಾಗಿ ಮಲಗಿಕೊಳ್ಳಬೇಕು. ಅಂದರೆ ನಿಮ್ಮ ಹೊಟ್ಟೆಯನ್ನು ನೆಲದ ಕಡೆಗೆ ಬರುವಂತೆ ಮಾಡಿ ಮಲಗಬೇಕು.

2. ಈ ಸಮಯದಲ್ಲಿ ನಿಮ್ಮ ಕೈಗಳು ಮತ್ತು ಭುಜ ಒಂದೇ ರೇಖೆಯಲ್ಲಿ ಇರಬೇಕು. ಸಾಧ್ಯವಾದಷ್ಟು ನಿಮ್ಮ ಎದೆಯ ಭಾಗಕ್ಕೆ ನಿಮ್ಮ ಅಂಗೈ ಗಳು ಹತ್ತಿರವಾಗಿದ್ದರೆ ಒಳ್ಳೆಯದು. ನಿಮ್ಮ ಎರಡು ಅಂಗೈ ಗಳು ನೆಲ ಸ್ಪರ್ಶ ಮಾಡಿರಬೇಕು.

3. ನಿಮ್ಮ ಸಂಪೂರ್ಣ ದೇಹದ ತೂಕವನ್ನು ನಿಮ್ಮ ಎರಡು ಅಂಗೈ ಗಳ ಮೇಲೆ ಬಿಟ್ಟು ನಿಧಾನವಾಗಿ ನಿಮ್ಮ ತಲೆ ಮತ್ತು ಸೊಂಟವನ್ನು ಮೇಲೆತ್ತಿ.

4. ನಿಧಾನವಾಗಿ ನಿಮ್ಮ ಸೊಂಟದ ಭಾಗವನ್ನು, ನಿಮ್ಮ ತೊಡೆಗಳ ಮತ್ತು ಪಾದಗಳ ಭಾಗವನ್ನು ನೆಲದ ಕಡೆಗೆ ಒತ್ತಿ.

5. ಸಾಧಾರಣವಾಗಿ ಉಸಿರಾಡುವ ಈ ಸಂದರ್ಭದಲ್ಲಿ ಹತ್ತು ಸೆಕೆಂಡುಗಳು ಹಾಗೆ ಇರಿ.

6. ನಿಧಾನವಾಗಿ ನಿಮ್ಮ ಹಣೆಯನ್ನು ನೆಲದ ಕಡೆಗೆ ಇರಿಸಿ ಮತ್ತೆ ಸಹಜ ಸ್ಥಿತಿಗೆ ಮರಳಿ ಬನ್ನಿ.

ಬಾಲಾಸನ

ಇದು ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸುವ ಯೋಗಾಭ್ಯಾಸ ಎಂದು ಹೇಳಬಹುದು. ನಿಮ್ಮ ಮನಸ್ಸನ್ನು ಒತ್ತಡದಿಂದ ದೂರ ಮಾಡಿ ಕೇವಲ ಕೆಲವೇ ನಿಮಿಷಗಳಲ್ಲಿ ನಿಮ್ಮನ್ನು ಪ್ರಸನ್ನರನ್ನಾಗಿ ಮಾಡಿ ನಿಮ್ಮ ಮನಸ್ಸನ್ನು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

ಬಾಲಾಸನ ಯೋಗಾಭ್ಯಾಸವನ್ನು ಹೇಗೆ ಮಾಡಬಹುದು

1. ಮೊದಲು ನೆಲದ ಮೇಲೆ ನಿಮ್ಮ ಮಂಡಿಗಳಲ್ಲಿ ಕುಳಿತುಕೊಳ್ಳಿ

2. ಈಗ ನಿಮ್ಮ ಮಂಡಿಗಳ ಮೇಲೆ ನಿಮ್ಮ ಎದೆಯ ಭಾಗವನ್ನು ಇರಿಸಿ ನಿಮ್ಮ ಹಣೆಯನ್ನು ನೆಲದ ಮೇಲೆ ಇರಲು ಬಿಡ

3. ಕೆಲವು ಬಾರಿ ಉಸಿರಾಡಿ ನಿಮ್ಮ ಮಾನಸಿಕ ಆಲೋಚನೆಯನ್ನು ಬೇರೆಡೆಗೆ ತಿರುಗುವಂತೆ ಮಾಡಿ.

ಹಿಂದಿನ ಲೇಖನಪಾರ್ವತಿಪುತ್ರ ಪಾವನಗಾತ್ರ
ಮುಂದಿನ ಲೇಖನಈ ಐದು ರಾಶಿಯವರಿಗೆ ಸೋಲೆಂದರೆ ಇಷ್ಟವೇ ಇಲ್ಲ..!