ಕಾಯೋ ಎನ್ನ ಶುಭಕಾಯ ಭಜಿಸುವೆನೋ..
ರಾಘವೇಂದ್ರಾ…ಯತಿರಾಜಾ…
ಗುರುಾಜಾ…ಯತಿರಾಜಾ…
ಕಾಯೋ ಎನ್ನ ಶುಭಕಾಯ ಭಜಿಸುವೆನು ||2||
ಮಾಯ ತನಕೆ ಚಂದ್ರಾ ಶ್ರೀ ಗುರು ರಾಯ ರಾಘವೇಂದ್ರ
ಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||ಭೋ||
ಕಂಡ ಕಂಡ ಕಡೆಗೇ ,ತಿರುಗಿ ಬೆಂಡಾದೆನು ಕೊನೆಗೇ… ||
ಕಂಡ ಕಂಡವರನು ಕೊಂಡಾಡುತ ನಿಮ್ಮ || 2 ||
ಕಂಡೆ ಕಟ್ಟ ಕಡೆಗೇ ಶ್ರೀ ಗುರು ರಾಯ ರಾಘವೇಂದ್ರ ||
ಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||
ನಿಯಮವು ಎನಗೆಲ್ಲೀ ಇರುವುದು ಆ ಕಾಮಾಧಮನಲ್ಲಿ |
ಭೋ ಮಹಾಮಹಿಮನೆ ಪಾಮರ ನಾ ನಿಮ್ಮ |
ನಾಮ ಒಂದೇ ಬಲ್ಲೆ ಶ್ರೀ ಗುರು ರಾಯ ರಾಘವೇಂದ್ರ |
ಭೋ ಮಹಾ ಮಹಿಮನೆ ಪಾಮರ ನಾ ನಿಮ್ಮ |
ನಾಮ ಒಂದೇ ಬಲ್ಲೇ ಶ್ರೀ ಗುರು ರಾಯ ರಾಘವೇಂದ್ರ ||
ಭೋ ಯತಿ ವರದೇಂದ್ರ
ಶ್ರೀ ಗುರು ರಾಯ ರಾಘವೇಂದ್ರ ||ಭೋ||
ಮಂತ್ರವ ನಾನರಿಯೇ ಶ್ರೀ ಮನ್ ಮಂತ್ರಾಲಯ ದೊರೆಯೇ |
ಅಂತರಂಗದೊಳು ನಿಂತು ಪ್ರೇರಿಸುವ |
ಅನಂತ್ರಾಧೀಶನರಿಯೆ ಶ್ರೀ ಗುರು ರಾಯ ರಾಘವೇಂದ್ರ
ಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||
||ಕಾಯೋ||