ಮನೆ ರಾಜಕೀಯ ನರೇಂದ್ರ ಮೋದಿ ಚುನಾವಣಾ ಪ್ರಚಾರದ ಎಫೆಕ್ಟ್ ಗೆ ಕಾಂಗ್ರೆಸ್ ಕಸಿವಿಸಿ

ನರೇಂದ್ರ ಮೋದಿ ಚುನಾವಣಾ ಪ್ರಚಾರದ ಎಫೆಕ್ಟ್ ಗೆ ಕಾಂಗ್ರೆಸ್ ಕಸಿವಿಸಿ

0

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಬಿರುಸಿನ ಚುನಾವಣಾ ಪ್ರಚಾರದ ಕಾವೇರಿದ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಗುಂಡ್ಲುಪೇಟೆ, ನಂಜನಗೂಡು ಮತ್ತು ಮೈಸೂರಿನ ವಿವಿಧ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಮೈಸೂರು ಭಾಗದಲ್ಲಿ ವಿವಿಧ ರ್ಯಾಲಿ ಸಮಾವೇಶ ನಡೆಸಿದರು.  ಮೋದಿಯವರ ರ್ಯಾಲಿಯಲ್ಲಿನ ದೊಡ್ಡ ಜನಸ್ತೋಮ ಮತ್ತು ಅವರ ಪ್ರಬಲ ಭಾಷಣವು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದ್ದು. ಅದರ ಯಶಸ್ಸು ಕಾಂಗ್ರೆಸ್ಸಿಗೆ ಸ್ವಲ್ಪಮಟ್ಟಿನ ಕಸಿವಿಸಿ  ಬಿಸಿ ತಾಕಿದೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ, ಅವರ ಸರ್ಕಾರದ ಅಡಿಯಲ್ಲಿ ನೇರ ಹಣ ವರ್ಗಾವಣೆ ಯೋಜನೆ ಮತ್ತು ಬಜರಂಗದಳದ ಮೇಲೆ ಕಾಂಗ್ರೆಸ್ ಪ್ರಸ್ತಾಪಿಸಿದ ನಿಷೇಧದ ವಿಷಯಗಳನ್ನು  ಪ್ರಧಾನಿ ಮೋದಿ ಭಾಷಣದ ಮೂಲಕ ಜನರಿಗೆ ತಲುಪಿಸಲು ಪ್ರಯತ್ನಿಸಿದರು. ಸಾರ್ವಜನಿಕ ಪ್ರಚಾರದ ಕೊನೆಯ ದಿನದಂದು ಸಿದ್ದರಾಮಯ್ಯ ತಮ್ಮ ಪಕ್ಷಕ್ಕೆ ಉಂಟಾದ ಹಾನಿಯನ್ನು ತಡೆಯಲು ಮತ್ತು ಮೋದಿ ಎಫೆಕ್ಟ್  ತಗ್ಗಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು.

Ads by 

ಬೆಲೆ ಏರಿಕೆ, ನಿರುದ್ಯೋಗ ಹಾಗೂ ಸರ್ಕಾರದ ಶೇ.40ರಷ್ಟು ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರಕಾರ ಕಾರ್ಪೊರೇಟ್ ಕಂಪನಿಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಆದರೆ ರೈತರ ಸಮಸ್ಯೆ ನಿವಾರಣೆಗೆ ಏನೂ ಮಾಡಿಲ್ಲ ಎಂದರು. ‘ಬಿಜೆಪಿ ಅಧಿಕಾರಕ್ಕೆ ಬಂದರೆ ಕಮಿಷನ್ ಶೇ.40ರಿಂದ 80ಕ್ಕೆ ಏರಬಹುದು’ ಎಂದು ಮತದಾರರಿಗೆ ಎಚ್ಚರಿಕೆ ನೀಡಿದರು.

ಸರ್ಕಾರದ ಯೋಜನೆಯಡಿ ಮನೆ ಕೊಡಿ ಎಂದು ಕೇಳುತ್ತಿದ್ದ ಮಹಿಳೆಗೆ ಕಪಾಳಮೋಕ್ಷ ಮಾಡಿದ ವಸತಿ ಸಚಿವ ವಿ.ಸೋಮಣ್ಣ ಅವರಿರುವ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದರು. ನಂತರನಂಜನಗೂಡಿನಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಸೂಕ್ತ ವಿಷಯಗಳನ್ನು ಪ್ರಸ್ತಾಪಿಸಲು ವಿಫಲರಾದ ಕಾರ್ಯನಿರ್ವಹಣೆ ಮಾಡದ ಬಿಜೆಪಿ ಶಾಸಕ ಹರ್ಷವರ್ಧನ್ ಅವರಿಗೆ ಮತ ಹಾಕಬೇಕೆ ಎಂದು ಜನರನ್ನು ಪ್ರಶ್ನಿಸಿದರು.

ಆರ್. ದ್ರುವನಾರಾಯಣ್ ಅವರಂತಹ ಕಾರ್ಯಪ್ರವೃತ್ತರ ಸೋಲು ಮತ್ತು ನಿಧನ ಕಾಂಗ್ರೆಸ್ ಗೆ ದೊಡ್ಡ ನಷ್ಟವಾಗಿದ್ದು, ಹಣಬಲ ಮತ್ತು ಜನಬಲದ ನಡುವೆ ಚುನಾವಣೆ ನಡೆಯುತ್ತಿದೆ ಎಂದರು. ಒಂದೇ ತಿಂಗಳ ಅವಧಿಯಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ದರ್ಶನ್ ದ್ರುವನಾರಾಯಣ್ ಅವರನ್ನು ಬೆಂಬಲಿಸುವಂತೆ ಅವರು ಜನರಿಗೆ ಕರೆ ನೀಡಿದರು.

ಕಾಂಗ್ರೆಸ್ ಅಧಿಕಾರ ಸ್ವೀಕರಿಸಿದ ನಂತರ ಚುನಾವಣಾ ಪೂರ್ವ ಭರವಸೆಗಳನ್ನು ಜಾರಿಗೆ ತರಲಿದೆ ಎಂದು ಹೇಳಿದ ಸಿದ್ದರಾಮಯ್ಯ, ಮೋದಿಯವರಿಗೆ ರಾಜ್ಯದ ಹಣಕಾಸಿನ ಬಗ್ಗೆ ಯಾವುದೇ ಅರಿವಿಲ್ಲ ಎಂದು ಆರೋಪಿಸಿದರು. ಚಾಮುಂಡೇಶ್ವರಿಯಲ್ಲಿ 2018ರಲ್ಲಿ ತನ್ನನ್ನು ಸೋಲಿಸಿದ ಬದ್ಧ ವೈರಿ ಜಿಟಿ ದೇವೇಗೌಡರನ್ನು ಸೋಲಿಸುವಂತೆ ಸಿದ್ದರಾಮಯ್ಯ ಕರೆ ನೀಡಿದರು.

ಚಾಮರಾಜ ಮತ್ತು ಕೃಷ್ಣರಾಜ ಕ್ಷೇತ್ರಗಳಲ್ಲಿಯೂ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಬಿಜೆಪಿ ನಾಯಕರುಗಳು ಪ್ರಚಾರ ನಡೆಸಿದ್ದಾರೆ.

ಹಿಂದಿನ ಲೇಖನಈ ಬಾರಿ ಸಿಎಂ ಆಗಲು ನನಗೂ ಅವಕಾಶ ಕೊಡಿ: ಡಿ.ಕೆ.ಶಿವಕುಮಾರ್
ಮುಂದಿನ ಲೇಖನಕರ್ನಾಟಕ ಸಿಇಟಿ ಪ್ರವೇಶ ಪತ್ರ ಬಿಡುಗಡೆ: ಮೇ 20ಕ್ಕೆ ಪ್ರವೇಶ