ಮನೆ ಕಾನೂನು ಅಪ್ರಾಪ್ತನಿಂದ ವಾಹನ ಚಾಲನೆ: ಪೋಷಕರಿಗೆ 20 ಸಾವಿರ ರೂ. ದಂಡ

ಅಪ್ರಾಪ್ತನಿಂದ ವಾಹನ ಚಾಲನೆ: ಪೋಷಕರಿಗೆ 20 ಸಾವಿರ ರೂ. ದಂಡ

0

ಬೇಲೂರು(Beluru):  ಅಪ್ರಾಪ್ತ ಬಾಲಕನಿಗೆ ಚಾಲನೆ ಮಾಡಲು ವಾಹನ ನೀಡಿದ ಪೋಷಕರಿಗೆ ಬೇಲೂರು ಜೆಎಂಎಫ್‌ಸಿ ನ್ಯಾಯಾಲಯ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

2021ರ ಸೆಪ್ಟೆಂಬರ್‌ 6ರಂದು ಹಳೇಬೀಡು ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ.

ಅಜಾಗರೂಕತೆ, ಹೆಲ್ಮೆಟ್‌, ದಾಖಲೆ ಮತ್ತು ಲೈಸೆಸ್ಸ್‌ ಇಲ್ಲದೆ ಚಾಲನೆ ಮಾಡಿದ್ದರಿಂದ ತಲಾ ಒಂದೊಂದು ಸಾವಿರದಂತೆ ನಾಲ್ಕು ಸಾವಿರ ದಂಡ ವಿಧಿಸಲಾಗಿದೆ. ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಪೋಷಕರಿಗೆ 16 ಸಾವಿರ ರೂ. ದಂಡ ವಿಧಿಸಿ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

ಬಾಲಕನು ಕಾನೂನು ಉಲ್ಲಂಘಿಸಿ ವಾಹನ ಚಾಲನೆ ಮಾಡಿದ್ದರಿಂದ ದಂಡದ ಜತೆಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶವಿತ್ತು. ಬಾಲಕ ಕ್ಷಮೆ ಯಾಚಿಸಿದ್ದರಿಂದ ಮುಂದಿನ ಭವಿಷ್ಯದ ದೃಷ್ಟಿಯಿಂದ ಒಂದು ದಿನ ಪೂರ್ತಿ ನ್ಯಾಯಾಲಯದಲ್ಲಿ ನಿಲ್ಲಿಸುವ ಮೂಲಕ ಶಿಕ್ಷೆ ವಿಧಿಸಲಾಯಿತು. ಅಪ್ರಾಪ್ತರಿಗೆ ಪೋಷಕರು ವಾಹನ ಚಾಲನೆಗೆ ಅವಕಾಶ ನೀಡಬಾರದು. ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕು ಎಂದು ಸಿವಿಲ್‌ ನ್ಯಾಯಾಧೀಶರಾದ ಸಿ ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ.

ಹಿಂದಿನ ಲೇಖನಪುಂಡ ಪೋಕರಿ ಎಂದು ಬೈಯ್ದಾತನ ವಿರುದ್ಧದ ಎಫ್ಐಆರ್ ರದ್ದು ಇಲ್ಲ: ಹೈಕೋರ್ಟ್
ಮುಂದಿನ ಲೇಖನಮೈಸೂರು: ಆತ್ಮಹತ್ಯೆಗೆ ಶರಣಾದ ಪೊಲೀಸ್ ಪೇದೆ