ಮನೆ ಅಪರಾಧ ಪಾಕಿಸ್ತಾನದಿಂದ ಮಾದಕ ವಸ್ತುಗಳ ಕಳ್ಳಸಾಗಣೆ: ಮೂವರ ಬಂಧನ

ಪಾಕಿಸ್ತಾನದಿಂದ ಮಾದಕ ವಸ್ತುಗಳ ಕಳ್ಳಸಾಗಣೆ: ಮೂವರ ಬಂಧನ

0

ದೆಹಲಿ: ಪಾಕಿಸ್ತಾನದಿಂದ ಮಾದಕವಸ್ತು ಕಳ್ಳಸಾಗಾಣೆ ಮಾಡುತ್ತಿದ್ದ ಮೂವರನ್ನು  ದೆಹಲಿ ಪೊಲೀಸ್‌’ನ ಕೌಂಟರ್ ಇಂಟೆಲಿಜೆನ್ಸ್ ಯುನಿಟ್ ಇಂದು ಬಂಧಿಸಿದೆ.

Join Our Whatsapp Group

ಆರೋಪಿಗಳಾದ ಮಲ್ಕಿತ್ ಸಿಂಗ್, ಧರ್ಮೇಂದ್ರ ಸಿಂಗ್ ಮತ್ತು ಹರ್ಪಾಲ್ ಸಿಂಗ್ ಬಂಧಿತರು. ಮೂವರು ಪಂಜಾಬ್ ನಿವಾಸಿಗಳಾಗಿದ್ದು, ದೆಹಲಿಯ ಸರಾಯ್ ಕಾಲೇ ಖಾನ್‌’ನಿಂದ ಕೌಂಟರ್ ಇಂಟೆಲಿಜೆನ್ಸ್ ಯುನಿಟ್‌’ನ ವಿಶೇಷ ಇಲಾಖೆಯಿಂದ ಬಂಧಿಸಲಾಗಿದೆ.

ಪಂಜಾಬ್‌’ನಲ್ಲಿ ಪರಾರಿಯಾಗಿರುವ ಮೂವರು ಡ್ರಗ್ ಪೂರೈಕೆದಾರರು ಯುಎಸ್ ಮತ್ತು ಫಿಲಿಪೈನ್ಸ್‌ ದೇಶದಲ್ಲಿ ಇದ್ದರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಡ್ರಗ್ಸ್’​​​​ನ್ನು ಪಾಕಿಸ್ತಾನಕ್ಕೆ ಹವಾಲಾ ಜಾಲದ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ಇದರ ಜತೆಗೆ ಹಣಕ್ಕೆ ಬದಲಾಗಿ ಡ್ರೋನ್‌’ಗಳು, ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಪಾಕಿಸ್ತಾನದಿಂದ ಡ್ರಗ್ಸ್ ಸಾಗಣೆ ಮಾಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌’ಗಳಲ್ಲಿ ಫಿಲಿಪೈನ್ಸ್ ಮತ್ತು ಯುಎಸ್‌’ನ ಫೋನ್ ಸಂಖ್ಯೆಗಳು ಪತ್ತೆಯಾಗಿವೆ. ಇದರ ಹಿಂದೆ ದೊಡ್ಡ ಜಾಲವೇ ಇದೆ, ಅವರನ್ನು ಪತ್ತೆ ಮಾಡಲು ಈ ಫೋನ್​​​ ಸಹಾಯವಾಗಬಹುದು ಎಂದು ಹೇಳಲಾಗಿದೆ.

ಹಿಂದಿನ ಲೇಖನಸರಿಯಾದ ಸಮಯಕ್ಕೆ ಬಾರದ ಆ್ಯಂಬುಲೆನ್ಸ್: ನಡುರಸ್ತೆಯಲ್ಲೇ ಪ್ರಾಣಬಿಟ್ಟ ಯುವಕ
ಮುಂದಿನ ಲೇಖನಎನ್’ಎಫ್’ಟಿಯಲ್ಲಿ ಅನಧಿಕೃತವಾಗಿ ಹೆಸರು, ಚಿತ್ರ ಬಳಕೆ: ದೆಹಲಿ ಹೈಕೋರ್ಟ್ ಕದತಟ್ಟಿದ ಐವರು ಕ್ರಿಕೆಟಿಗರು