ಮನೆ ಮನರಂಜನೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಸಿನಿಮಾಗೆ ಪನ್ನಗ ಭರಣ ನಿರ್ದೇಶನ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಸಿನಿಮಾಗೆ ಪನ್ನಗ ಭರಣ ನಿರ್ದೇಶನ

0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅವರು ಪನ್ನಗ ಭರಣ ನಿರ್ದೇಶನದ ಹೊಸ ಸಿನಿಮಾವೊಂದರಲ್ಲಿ ಬಣ್ಣಹಚ್ಚಲಿದ್ದಾರೆ.

ಸದ್ಯಕ್ಕೆ ‘ಮಮ್ಮಿ’ ಹಾಗೂ ‘ದೇವಕಿ’ ಸಿನಿಮಾ ನಿರ್ದೇಶಿಸಿದ್ದ ಲೋಹಿತ್ ಎಚ್‌. ನಿರ್ದೇಶನದ ‘ಮಾಫಿಯಾ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪ್ರಜ್ವಲ್‌ ದೇವರಾಜ್‌, ಇದೀಗ ಇತ್ತೀಚೆಗೆ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಸಮಾರಂಭ ಸರಳವಾಗಿ ನಡೆಯಿತು.

Advertisement
Google search engine

ಇದೇ ಮೊದಲ ಬಾರಿಗೆ ಪನ್ನಗ ಭರಣ ಅವರು ಪ್ರಜ್ವಲ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರವನ್ನು ಫಿಲ್ಮಿ ಫೆಲೋ ಸ್ಟುಡಿಯೋಸ್ ಅರ್ಪಿಸುತ್ತಿದ್ದು, ಆಲ್ ಓಶನ್ ಮೀಡಿಯಾ ಪ್ರೈ.ಲಿಮಿಟೆಡ್ ಮತ್ತು ಮಾತ ಭಗವತಿ ಪಿಕ್ಚರ್ಸ್‌ ನಿರ್ಮಾಣ ಮಾಡುತ್ತಿದೆ.ಬಾಲಿವುಡ್‌ನ ಅಧಿರ್‌ ಭಟ್ ಬರೆದಿರುವ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಕಥೆ ಇದಾಗಿದೆ ಎಂದು ಚಿತ್ರತಂಡವು ತಿಳಿಸಿದೆ.

‘ಮಾಫಿಯಾ’, ‘ಗಣ’ ಚಿತ್ರಗಳಲ್ಲಿ ಪ್ರಜ್ವಲ್‌ ತೊಡಗಿಕೊಂಡಿದ್ದು, ಇವುಗಳ ಚಿತ್ರೀಕರಣ ಪೂರ್ಣಗೊಂಡ ಬಳಿಕ ಈ ತಂಡವನ್ನು ಅವರು ಸೇರಿಕೊಳ್ಳಲಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತವಿದ್ದು, ವಿರಾಜ್‌ ಸಿಂಗ್‌ ಛಾಯಾಗ್ರಹಣವಿದೆ. ತಾರಾಗಣ ಮತ್ತು ತಂತ್ರಜ್ಞರ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.

ಹಿಂದಿನ ಲೇಖನಯುಪಿ ವಿಧಾನಸಭೆ ಚುನಾವಣೆ: ಮುಲಾಯಂ ಸೊಸೆ ಬಿಜೆಪಿ ಸೇರ್ಪಡೆ
ಮುಂದಿನ ಲೇಖನಪಾಲಿಕೆ ಅನುಮತಿ ಪಡೆಯದೇ ಆದಿಚುಂಚನಗಿರಿ ಹಿರಿಯ ಶ್ರೀಗಳ ಹೆಸರುಳ್ಳ ಫಲಕ ಅಳವಡಿಕೆ