ಮನೆ ರಾಜ್ಯ ಬಿಜೆಪಿ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ  ದಸಂಸ ಒತ್ತಾಯ

ಬಿಜೆಪಿ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ  ದಸಂಸ ಒತ್ತಾಯ

0

ಮೈಸೂರು(Mysuru): ಸ್ಯಾಂಟ್ರೊ ರವಿ ಬಂಧಿಸದೇ ಅನೈತಿಕ ರಾಜಕಾರಣ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪ ಜಮಾಯಿಸಿದ ಪ್ರತಿಭಟನಕಾರರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಮಾತನಾಡಿ, ದಲಿತ ಸಮುದಾಯಕ್ಕೆ ಸಂತ್ರಸ್ತ ಯುವತಿ ವಿಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿ 12 ದಿನವಾದರೂ ಆರೋಪಿ ಸ್ಯಾಂಟ್ರೊ ರವಿ ಬಂಧನವಾಗಿಲ್ಲ. ಜನಸಾಮಾನ್ಯರಿಗೆ ಸರ್ಕಾರದಿಂದ ರಕ್ಷಣೆ ಇಲ್ಲವಾಗಿದೆ ಎಂದು ದೂರಿದರು.

ಸ್ಯಾಂಟ್ರೊ ರವಿ ಜೊತೆ ಶಾಮೀಲಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

‘ಒಡನಾಡಿ’ ಸಂಸ್ಥಾಪಕ ಸ್ಟ್ಯಾನ್ಲಿ ಮಾತನಾಡಿ, ರಾಜಧಾನಿಯಲ್ಲಿ ಭ್ರಷ್ಟ್ರ ವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಂಡು ಎಲ್ಲ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಆಡಳಿತ ವ್ಯವಸ್ಥೆಯನ್ನೇ ಸ್ಯಾಂಟ್ರೊ ರವಿ ಆವರಿಸಿಕೊಂಡಿದ್ದು, ಯುವತಿಯರನ್ನು ಬಳಸಿಕೊಂಡು ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾನೆ. ಅನ್ಯಾಯ ಮಾರ್ಗದಲ್ಲಿ ಸಾಗಿರುವ ಪ್ರತಿಯೊಬ್ಬರ ಮೇಲೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದರು.

ತಪ್ಪು ಮಾಡಿದ ಅಧಿಕಾರಿಗಳು ಹಾಗೂ ಮುಖಂಡರು ಕಾನೂನಿನ ಚೌಕಟ್ಟಿಗೆ ಬರಬೇಕು. ಬಲವಾದ ಸಾಕ್ಷ್ಯಗಳು ಸಿಕ್ಕಿರುವಾಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಜನರಿಗೆ ಅನ್ಯಾಯವಾಗಲಿದೆ ಎಂದರು.

ದಸಂಸದ ಆಲಗೂಡು ಶಿವಕುಮಾರ್‌, ಮಣಿಯಯ್ಯ ಭುಗತಹಳ್ಳಿ, ಕಲ್ಲಹಳ್ಳಿ ಶಿವಕುಮಾರ್, ಮಂಜು ಶಂಕರಪುರ, ಮರಿಸ್ವಾಮಿ, ತಗಡೂರು ಬಸವರಾಜ್‌, ಪ್ರೊ.ಪಂಡಿತಾರಾಧ್ಯ, ರಾಜೇಶ್ವರಿ, ರತ್ನಮ್ಮ, ಶಿವಮ್ಮ, ಪ್ರಿಯಾ ಇದ್ದರು.

ಹಿಂದಿನ ಲೇಖನಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದಿಂದ ೨ ದಿನಗಳ ಕಾರ್ಯಾಗಾರ: ಡಾ. ರಾಕೇಶ್ ಕುಮಾರ್
ಮುಂದಿನ ಲೇಖನತ್ರಿಭುವನ ಜನನಿ ಜಗನ್ಮೋಹಿನಿ