ನವದೆಹಲಿ : ಆಫ್ರಿಕಾದ ಹಲವು ಭಾಗಗಳಲ್ಲಿ ಕೋವಿಡ್ಗಿಂತಲೂ ಡೆಡ್ಲಿಯಾದ ಎಬೋಲಾ ವೈರಸ್ ಹಾವಳಿ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಕಟ್ಟೆಚ್ಚರಕ್ಕೆ ಆದೇಶ ನೀಡಲಾಗಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಬೋಲಾ ಕುರಿತು ನೀಡಲಾಗಿದ್ದು, ಹೈ-ರಿಸ್ಕ್ ದೇಶಗಳ ಪ್ರಯಾಣಿಕರಿಗೆ ಹಲವು ಸೂಚನೆಗಳನ್ನ ನೀಡಲಾಗಿದೆ.
ಈ ಮಧ್ಯೆ ದೆಹಲಿಯಲ್ಲಿ ನಡೆಯಬೇಕಾಗಿದ್ದ ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನೂ ಮುಂದೂಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಶೃಂಗಸಭೆಯನ್ನು ಮುಂದೂಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ರಾಜ್ಯ ಆರೋಗ್ಯ ಇಲಾಖೆಗೆ ಏನು ಸೂಚನೆ?
- ಕ್ವಾರಂಟೈನ್ ಸೆಂಟರ್ ಗುರುತು ಮಾಡಿ
- ಐಸೂಲೇಷನ್ ಸೌಲಭ್ಯ ಇರುವ ಕ್ವಾರಂಟೈನ್ ಸೆಂಟರ್
- ಹೆಲ್ತ್ ಸ್ಕ್ರೀನಿಂಗ್ ಗೆ ಸಿಬ್ಬಂದಿಯನ್ನ ಹೆಚ್ಚಳ ಮಾಡಿಕೊಳ್ಳಿ
- ಶಂಕಿತ ಕೇಸ್ ಗಳಿದ್ದರೆ ಆಸ್ಪತ್ರೆಗೆ ರವಾನಿಸಲು ಅಂಬುಲೆನ್ಸ್ ನಿಯೋಜಿಸಿ
- ಎಬೋಲಾ ಚಿಕಿತ್ಸೆ ಬಗ್ಗೆ ಹೆಲ್ತ್ ವರ್ಕರ್ಸ್ ಅರಿವು ಮೂಡಿಸುವಂತೆ ಸೂಚನೆ
ಎಬೋಲಾ ನಿಯಂತ್ರಣಕ್ಕೆ ಏರ್ಪೋರ್ಟ್ಗಳಿಗೆ ಮಾರ್ಗಸೂಚಿ ಪ್ರಕಟ..!
- ತ್ರಿಬಲ್ ಲೇಯರ್ ಮಾಸ್ಕ್ ಕಡ್ಡಾಯ
- ಹ್ಯಾಂಡ್ ಗ್ಲೌಸ್ ಹಾಕಬೇಕು
- ಸ್ಯಾನಿಟೇಸರ್ ಅನ್ನು ಇಟ್ಟಿಕೊಳ್ಳಬೇಕು
- ಎಬೋಲಾ ಶಂಕಿತ ಕೇಸ್ ಪತ್ತೆ ಆದರೆಕೂಡಲೇ ರಿಪೋರ್ಟ್ ಮಾಡಬೇಕು
- ಪ್ರಯಾಣಿಕರ ಟ್ರಾವೆಲ್ ಹಿಸ್ಟರಿ ದಾಖಲು ಮಾಡಿಕೊಳ್ಳಬೇಕು
- ಸೆಲ್ಪ್ ಡಿಕ್ಲರೇಷನ್ ಫಾರ್ಮ್ ಬರೆದುಕೊಡಬೇಕು
- ಎಬೋಲಾ ಬಾಧಿತ ದೇಶಗಳಿಂದ ಬಂದರ ಡಿಟೇಲ್ಸ್ ಜೊತೆಗೆ ಸೆಲ್ಪ್ ಡಿಕ್ಲರೇ ಕಡ್ಡಾಯ
ಎಬೋಲಾ ಬಂದ ವ್ಯಕ್ತಿಗೆ ಐಸೂಲೇಷನ್ ಹೇಗೆ?
- ಪ್ರತ್ಯೇಕ ಕೊಠಡಿಯಲ್ಲಿ ಐಸೂಲೇಟ್ ಮಾಡಬೇಕು
- ಬಾತ್ ರೂಮ್ ಇರುವ ಕೊಠಡಿಯಲ್ಲಿ ಐಸೂಲೇಟ್ ಮಾಡಬೇಕು
- ಕೊಠಡಿ ಪ್ರವೇಶಕ್ಕೆ ಪಿಪಿಇ ಕಿಟ್ ಕಡ್ಡಾಯವಾಗಿ ಧರಿಸಬೇಕು
- ಪ್ರತಿ 2 ಗಂಟೆಗೆ ಒಮ್ಮೆ ಆಕ್ಸಿಜನ್ ರಕ್ತದ ಆಮ್ಲಜನಕ ಪರೀಕ್ಷಿಸಬೇಕು
- 2 ಗಂಟೆಗೆ ಒಮ್ಮೆ ಕಾರ್ಡಿಯಾಕ್ ಟೆಸ್ಟ್ ಆಗಬೇಕು
ಹೈ-ರಿಸ್ಕ್ ದೇಶದಿಂದ ಬಂದ ಪ್ರಯಾಣಿಕರು ಏನು ಮಾಡಬೇಕು?
- ಹೈ-ರಿಸ್ಕ್ ದೇಶದಿಂದ ಬಂದು 21 ದಿನಗಳಲ್ಲಿ ರೋಗಲಕ್ಷಣ ಕಾಣಿಸಿಕೊಂಡರೆ ತಿಳಿಸಬೇಕು
- ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡರೂ ಆರೋಗ್ಯ ಇಲಾಖೆ ಅಧಿಕಾರಿಗಳು ಅಥವಾ ವೈದ್ಯರಿಗೆ ತಿಳಿಸಬೇಕು
- ಪ್ರಯಾಣದ ಹಿನ್ನೆಲೆ ಕಡ್ಡಾಯವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನೀಡಬೇಕು
- ವಿಮಾನ ನಿಲ್ದಾಣ ತಪಾಸಣೆ ನಂತರ ರೋಗ ಲಕ್ಷಣ ಕಾಣಿಸಿಕೊಂಡರೆ ಟೆಸ್ಟ್ ಕಡ್ಡಾಯವಾಗಿ ಮಾಡಿಸಬೇಕು
ಎಬೋಲಾ ಮರಣ ಪ್ರಮಾಣ ಎಷ್ಟು? – ಎಬೋಲಾ ಮರಣ ಪ್ರಮಾಣ 50%, ಸರಾಸರಿ ಮರಣ ಪ್ರಮಾಣ 50%..,

















