ಮನೆ ರಾಜ್ಯ ಪರಿಸರ ಪ್ರೇಮಿ, ರಾಜ್ಯ ಪ್ರಶಸ್ತಿ ವಿಜೇತ ಮಿಟ್ಲಕಟ್ಟೆ ವೀರಾಚಾರಿ ಆತ್ಮಹತ್ಯೆ

ಪರಿಸರ ಪ್ರೇಮಿ, ರಾಜ್ಯ ಪ್ರಶಸ್ತಿ ವಿಜೇತ ಮಿಟ್ಲಕಟ್ಟೆ ವೀರಾಚಾರಿ ಆತ್ಮಹತ್ಯೆ

0

ದಾವಣಗೆರೆ(Davanagere): ಪರಿಸರ ಪ್ರೇಮಿ, ಸಾಲು ಮರದ ವೀರಾಚಾರಿ ಎಂದೇ ಖ್ಯಾತಿ ಪಡೆದಿದ್ದ ರಾಜ್ಯ ಪ್ರಶಸ್ತಿ ವಿಜೇತ ಮಿಟ್ಲಕಟ್ಟೆ ವೀರಾಚಾರಿ ಅವರು ಮಿಟ್ಲಕಟ್ಟೆ ಗ್ರಾಮದಲ್ಲಿ ಕಳೆದ ರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲು ಮರಗಳನ್ನು ಬೆಳೆಸಿ ಪೋಷಿಸಿದ್ದ ಪರಿಸರ ಪ್ರೇಮಿಗೆ ಈ ಹಿಂದೆ ರಾಜ್ಯ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇತ್ತೀಚೆಗೆ ಇವರು ಮಿಟ್ಲಕಟ್ಟೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿದ್ದರು. ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೂಕ್ತವಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ನಿನ್ನೆ(ಸೋಮವಾರ) ಇದೇ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ್ಯಾಯ ಬೆಲೆ ಅಂಗಡಿ ರದ್ದು ಮಾಡಬೇಕೇ, ಬೇಡವೇ? ಎಂಬ ಬಗ್ಗೆ ಚರ್ಚೆ ನಡೆದಿತ್ತು. ಇತ್ತೀಚೆಗಿನ ಘಟನಾವಳಿಗಳಿಂದ ತೀವ್ರವಾಗಿ ಮನನೊಂದಿದ್ದ ವೀರಾಚಾರಿ ನ್ಯಾಯಾಲಯ, ಜನರು ಮತ್ತು ದೇವರಲ್ಲಿಯೂ ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುವೆ ಎಂದು ಹೇಳಿದ್ದರು. ಅದರಂತೆಯೇ ನಿನ್ನೆ ರಾತ್ರಿ 2 ಗಂಟೆಗೆ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

3,000ಕ್ಕೂ ಹೆಚ್ಚು ಮರಗಳನ್ನು ವೀರಾಚಾರಿ ಬೆಳೆಸಿದ್ದರು.

ಹಿಂದಿನ ಲೇಖನಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ರೂಪಿಸಲು ಮುಂದಾದ ಸರ್ಕಾರ
ಮುಂದಿನ ಲೇಖನಅಥ್ಲೀಟ್ ಎಂ.ಆರ್.ಪೂವಮ್ಮಗೆ 2 ವರ್ಷಗಳ ನಿಷೇಧ ಶಿಕ್ಷೆ