ಮನೆ ರಾಜಕೀಯ ಹೈಕೋರ್ಟ್ ತೀರ್ಪಿಗೆ ತಲೆ ಬಾಗಬೇಕು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಹೈಕೋರ್ಟ್ ತೀರ್ಪಿಗೆ ತಲೆ ಬಾಗಬೇಕು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಹಿಜಾಬ್ ಪ್ರಕರಣ ಸಂಬಂಧದ ಹೈಕೋರ್ಟ್ ನೀಡಿರುವ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋರ್ಟ್ ಏನು ಆದೇಶ ನೀಡಿದೆ ಎಂದು ಪೂರ್ಣವಾಗಿ ಗಮನಿಸಿಲ್ಲ. ಸದ್ಯ ನಾನು ಕೋರ್ಟ್ ಆದೇಶದ ಬಗ್ಗೆ ಕಾಮೆಂಟ್ ಮಾಡಲು ಹೋಗಲ್ಲ. ಹೈಕೋರ್ಟ್ ಏನು ಆದೇಶ ನೀಡಿದೆ ಎಂದು ಪೂರ್ಣವಾಗಿ ಓದಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು

ತೀರ್ಪಿನಿಂದ ಕಾಂಗ್ರೆಸ್ ನಾಯಕರಿಗೆ ಕಪಾಳ ಮೋಕ್ಷ ಆಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹಿಜಾಬ್ ನಿಂದ ಯಾರಿಗೂ ತೊಂದರೆ ಆಗಲ್ಲ ಅಂತಾ ಹೇಳಿದ್ದೆವು. ಮೊದಲಿನಿಂದಲೂ ಅವರು ಹಿಜಾಬ್​​ ಧರಿಸುತ್ತ ಬಂದಿದ್ದಾರೆ. ಇದರಿಂದಾಗಿ ಯಾರಿಗೂ ತೊಂದರೆ ಆಗಲ್ಲ ಎಂದು ಹೇಳಿದ್ದೆವು. ಇದರಿಂದ ಕಪಾಳ ಮೋಕ್ಷ ಎಲ್ಲಿಂದ ಆಗುತ್ತದೆ ಎಂದು ಪ್ರಶ್ನಿಸಿದರು.

ಹಿಂದಿನ ಲೇಖನಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಸಚಿವ ಡಾ.ಕೆ.ಸುಧಾಕರ್
ಮುಂದಿನ ಲೇಖನಬಾಲಿವುಡ್ ನಟಿ ಅಲಿಯಾಗೆ ಹುಟ್ಟುಹಬ್ಬದ ಸಂಭ್ರಮ