ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಾಗೇಶ್ ಕೊಂಡ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ.
ಸೆ.21ರಂದು ನಡೆದಿರುವ ಘಟನೆ ತಡವಾಗಿ ಬೆಳೆಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗಾಯಾಳು ಯುವಕನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆ್ಯಸಿಡ್ ದಾಳಿಯಿಂದಾಗಿ ನಾಗೇಶ್ ಮುಖ ಸಂಪೂರ್ಣ ಸುಟ್ಟಿದೆ. ಮುಖ ಊದಿಕೊಂಡಿದೆ. ಗುಲ್ಬರ್ಗ ಮೂಲದವನಾದ ನಾಗೇಶ್ ಘಟನೆ ಆಗ್ತಿದ್ದಂತೆ ರೂಮ್ ಮೇಟ್ ಗೆ ವಿಚಾರ ಹೇಳಿದ್ದ. ಫೋನಲ್ಲಿ ಮಾತಾಡಿಕೊಂಡು ಬರ್ತಾ ಇದ್ದೆ, ಈ ವೇಳೆ ಯಾರೊ ಆ್ಯಸಿಡ್ ಹಾಕಿ ಹೋಗಿದ್ದಾರೆ ಎಂದಿದ್ದ. ತಕ್ಷಣ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.