ಮನೆ Uncategorized ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನ

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನ

0

ಚಿಕ್ಕಬಳ್ಳಾಪುರ(Chikkaballapura): ಹೃದಯಾಘಾತದಿಂದ(Heart attack) ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ(G.V.Shri ramareddy) ಅವರು ಕೊನೆಯುಸಿರೆಳೆದಿದ್ದಾರೆ.

ಬೆಳಗ್ಗೆ 4 ಗಂಟೆಗೆ ಶ್ರೀರಾಮರೆಡ್ಡಿ ಅವರಿಗೆ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಬೆಳಗ್ಗೆ 7.28ಕ್ಕೆ ಮೃತಪಟ್ಟಿರುವುದಾಗಿ ತಾಲೂಕು ವೈದ್ಯಾಧಿಕಾರಿಗಳು ಘೋಷಿಸಿದರು.

ರಾಮರೆಡ್ಡಿ ಅವರು ಸಿಪಿಐಎಂ ಪಕ್ಷದಿಂದ ಶಾಸಕರಾಗಿದ್ದರು. ಸಿಪಿಐಎಂ ಪಕ್ಷದಿಂದ ಉಚ್ಚಾಟಿತರಾದ‌ ನಂತರ ಪ್ರಜಾ ಸಂಘರ್ಷ ಸಮಿತಿ ಪಕ್ಷ ಸ್ಥಾಪನೆ ಮಾಡಿದ್ದರು. ಶ್ರೀರಾಮರೆಡ್ಡಿ ಅವರ ನಿಧನಕ್ಕೆ ಅವರು ಬೆಂಬಲಿಗರ ಸಂತಾಪ ಸೂಚಿಸಿದ್ದಾರೆ.

ಇಂದೇ ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. 

ಹಿಂದಿನ ಲೇಖನಕೆಜಿಎಫ್: ಚಾಪ್ಟರ್-2: ಹಿಂದಿ ಚಿತ್ರರಂಗದಲ್ಲಿ ಎಲ್ಲಾ ದಾಖಲೆ ಉಡೀಸ್
ಮುಂದಿನ ಲೇಖನಸ್ವೀಡನ್, ಫಿನ್ ಲ್ಯಾಂಡ್ ಗೆ ರಷ್ಯಾ ಎಚ್ಚರಿಕೆ