ಮನೆ ಅಪರಾಧ ಹೊಡೆದಾಟದಲ್ಲಿ ಮಗನಿಗೆ ಚೂರಿಯಿಂದ ಇರಿದ ತಂದೆ

ಹೊಡೆದಾಟದಲ್ಲಿ ಮಗನಿಗೆ ಚೂರಿಯಿಂದ ಇರಿದ ತಂದೆ

0

ದಕ್ಷಿಣ ಕನ್ನಡ : ತಂದೆ ಮತ್ತು ಮಗನ ಮಧ್ಯೆ ಹೊಡೆದಾಟ ನಡೆದು ಮಗನ ಎದೆಯ ಭಾಗಕ್ಕೆ ತಂದೆಯೇ ಚೂರಿಯಿಂದ ಇರಿದಿರುವ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡ್ಯ ನಿವಾಸಿ ಐತಪ್ಪ ನಾಯ್ಕ್ ಮತ್ತು ಆತನ ಮಗ ಜಯಪ್ರಕಾಶ್ ನಡುವೆ ಮಾತಿನ ಚಕಮಕಿಯಾಗಿ ಹೊಡೆದಾಟ ನಡೆದಿದೆ. ಜಯಪ್ರಕಾಶ್‌ನ ಎದೆಗೆ ತಂದೆ ಐತ್ತಪ್ಪ ನಾಯ್ಕ್‌ರವರು ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡು ವಿಪರೀತವಾಗಿ ರಕ್ತಸ್ರಾವಕ್ಕೊಳಗಾದ ಪುತ್ರ ಜಯಪ್ರಕಾಶನನ್ನು ಸಂಬಂಧಿ ರವಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು‌.

ರಕ್ತಸ್ರಾವ ಹೆಚ್ಚಾದ ಹಿನ್ನೆಲೆ ಇಲ್ಲಿನ ವೈದ್ಯರು ಈತನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಸದ್ಯ ಈತನನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಹಿಂದಿನ ಲೇಖನದೇಶದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು: ರಾತ್ರಿ ವೇಳೆ ಪ್ರಕರಣ ವಿಚಾರಣೆ ನಡೆಸಿ ಇತಿಹಾಸ ಬರೆದ ಕೇರಳ ಹೈಕೋರ್ಟ್
ಮುಂದಿನ ಲೇಖನನಾರಾಯಣ ಗುರು ಸ್ತಬ್ಧಚಿತ್ರ ವಿವಾದ; ನಾಳೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ