ಮನೆ ಕಾನೂನು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು: ರಾತ್ರಿ ವೇಳೆ ಪ್ರಕರಣ ವಿಚಾರಣೆ ನಡೆಸಿ ಇತಿಹಾಸ ಬರೆದ...

ದೇಶದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು: ರಾತ್ರಿ ವೇಳೆ ಪ್ರಕರಣ ವಿಚಾರಣೆ ನಡೆಸಿ ಇತಿಹಾಸ ಬರೆದ ಕೇರಳ ಹೈಕೋರ್ಟ್

0

ಕೊಚ್ಚಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಮೊದಲ ಬಾರಿಗೆ ರಾತ್ರಿ ವೇಳೆ ಪ್ರಕರಣವೊಂದರ ವಿಚಾರಣೆ ನಡೆಸುವ ಮೂಲಕ ಕೇರಳ ಹೈಕೋರ್ಟ್ ಇತಿಹಾಸ ಸೃಷ್ಟಿಸಿದೆ.

ಏನಿದು ಘಟನೆ: ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿದ್ದ ಹಡಗು ನಿಗದಿತ ಶುಲ್ಕವನ್ನು ತೆರಲು ನಿರಾಕರಿಸಿತ್ತು. ರಾತ್ರಿ 11.30ಕ್ಕೆ ಜಸ್ಟೀಸ್ ದೇವನ್ ರಾಮಚಂದ್ರನ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವರ್ಚುವಲ್ ವಿಚಾರಣೆ ನಡೆಸಿ ಉಳಿಸಿಕೊಂಡಿರುವ ಮೊತ್ತ ಸಂದಾಯವಾಗದಿದ್ದಲ್ಲಿ ಹಡಗನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿದರು.

ಒಟ್ಟು 2.44 ಕೋಟಿ ರೂ. ಗಳನ್ನು ಹಡಗು ಮಾಲೀಕರು ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಮೊತ್ತವನ್ನು 25,000 ರೂ. ಬಡ್ಡಿ ಸೇರಿಸಿ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. 

ಹಿಂದಿನ ಲೇಖನ73ನೇ ಗಣರಾಜ್ಯೋತ್ಸವ: 939 ಪೊಲೀಸ್ ಪದಕ ಘೋಷಣೆ
ಮುಂದಿನ ಲೇಖನಹೊಡೆದಾಟದಲ್ಲಿ ಮಗನಿಗೆ ಚೂರಿಯಿಂದ ಇರಿದ ತಂದೆ