ಮನೆ ಮನರಂಜನೆ ನೈಜ ಘಟನೆ ಆಧಾರಿತ ಚಿತ್ರ ‘ವಿ 3’ ತೆರೆಗೆ

ನೈಜ ಘಟನೆ ಆಧಾರಿತ ಚಿತ್ರ ‘ವಿ 3’ ತೆರೆಗೆ

0

ವರಲಕ್ಷ್ಮಿ ಶರತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ವಿ 3’ ಸಿನಿಮಾ ಶುಕ್ರವಾರ ತೆರೆ ಕಂಡಿದೆ.

ಕನ್ನಡದ ಪಾವನಾ ಗೌಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅದುಕುಲಂ ನರೆನ್, ಈಸ್ಟರ್ ಅನಿಲ್ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನೈಜ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಅಪ್ಪ, ಮಗಳು ಹೀಗೆ ಸುಖ ಸಂಸಾರ. ಇದ್ದಕ್ಕಿದ್ದಂತೆ ಇವರ ಮೇಲೆ ಒಂದು ದಿನ ಕರಿ ಕಾರ್ಮೋಡ ಸರಿದಂತೆ ಒಂದು ಘಟನೆ ನಡೆಯುತ್ತದೆ.

ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಗುರಿ ಸಾಧಿಸುವ ಕಡೆ ಹೆಜ್ಜೆ ಇಡುತ್ತಿದ್ದ ಮಗಳ ಜೀವನದಲ್ಲಿ ಒಂದು ಕೆಟ್ಟ ಘಟನೆ ನಡೆಯುತ್ತದೆ. ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಅವಳ ಬದುಕು, ಗೊತ್ತು ಗುರಿ ಇಲ್ಲದಂತೆ ಆಗುತ್ತದೆ.

ಐಎಎಸ್ ವರಲಕ್ಷ್ಮಿ ನಡೆಸುವ ತನಿಖೆಯಿಂದ ಈ ಕುಟುಂಬಕ್ಕೆ ನ್ಯಾಯ ಸಿಗಬಹುದಾ ಅನ್ನೋದೇ ಈ ಸಿನಿಮಾದ ರೋಚಕತೆ.

‘ವಿಂಧ್ಯಾ ಸಂತ್ರಸ್ತೆ ತೀರ್ಪು ‘ ಸ್ಪೂರ್ತಿ ಪಡೆದು ಈ ಸಿನಿಮಾ ರೂಪುಗೊಂಡಿದೆ. ಅಮುದವನ್ ನಿರ್ದೇಶನ, ಶಿವ ಪ್ರಭು ಕ್ಯಾಮರಾ ಈ ಸಿನಿಮಾಕ್ಕೆ ಇದೆ. ಕನ್ನಡ, ತಮಿಳು, ತೆಲುಗು ಮೂರು ಭಾಷೆಯಲ್ಲಿ ದೇಶದ 450 ಸಿನಿಮಾ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

ಹಿಂದಿನ ಲೇಖನಸಲಿಂಗ ವಿವಾಹ: ಹೈಕೋರ್ಟ್’ಗಳ ಮುಂದಿರುವ ಎಲ್ಲಾ ಅರ್ಜಿಗಳನ್ನು ತನಗೆ ವರ್ಗಾಯಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್
ಮುಂದಿನ ಲೇಖನಕನ್ನಡಿಗರಿಗೆ ಕೈಗಾರಿಕೆಗಳ ಉದ್ಯೋಗದಲ್ಲಿ ಶೇ.80 ರಷ್ಟು ಪ್ರಾಶಸ್ತ್ಯ: ಸಿಎಂ ಬೊಮ್ಮಾಯಿ