ಮನೆ ಅಪರಾಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಂಚಕ್ಕೆ ಬೇಡಿಕೆ ಆರೋಪ: ನಾಲ್ವರ ಮೇಲೆ ಎಫ್ಐಆರ್

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಂಚಕ್ಕೆ ಬೇಡಿಕೆ ಆರೋಪ: ನಾಲ್ವರ ಮೇಲೆ ಎಫ್ಐಆರ್

0

ಬೆಂಗಳೂರು: ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ನಗರದ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗಳಾದ ಆನಂದ್, ನಾಗೇಶ್, ಗಿರೀಶ್, ರಂಜಿತ್ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ತಿಳಿದುಬಂದಿದೆ.

ಘಟನೆ ವಿವರ: ಲಕ್ಷ್ಮಿ ಎಂಬುವವರ ತಾಯಿ ಯಲ್ಲಮ್ಮ ಅವರನ್ನು ಚಿಕಿತ್ಸೆಗೆಂದು ಜ.21ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತಂದಿದ್ದರು. ಜ.28 ರಂದು ತಲೆಯ ಭಾಗಕ್ಕೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಐಸಿಯುಗೆ ಶಿಫ್ಟ್​ ಮಾಡಬೇಕಿತ್ತು. ಆಗ ಆಸ್ಪತ್ರೆಯ ನಾಲ್ವರು ಸಿಬ್ಬಂದಿ 50 ಸಾವಿರ ಲಂಚ ಕೊಡಲೇಬೇಕು ಎಂದು ಒತ್ತಡ ಹೇರಿದ್ದಾರೆ. ಕಡು ಬಡವರಾಗಿದ್ದರೂ ನಿಮ್ಮ ತಾಯಿ ಬದುಕಬೇಕೆಂದರೆ ತಕ್ಷಣ ಹಣ ತಂದಿಡಿ ಎಂದು ಸಂಬಂಧಿಕರಿಗೆ ಆರೋಪಿಗಳು ಬೆದರಿಸಿದ್ದರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರ ಮೇಲೆ ಎಫ್ಐಆರ್, ನೋಟಿಸ್ ಜಾರಿ: ನೊಂದ ಮಹಿಳೆ ಲಕ್ಷ್ಮಿ ದಕ್ಷಿಣ ವಿಭಾಗದ ವಿ.ವಿ.ಪುರಂ ಠಾಣೆಗೆ ದೂರು ನೀಡಿದ್ದು, ಪ್ರಾಥಮಿಕ ತನಿಖೆ ಹಾಗೂ ಸಾಕ್ಷ್ಯಾಧಾರದ ಆಧಾರದ ಮೇಲೆ ನಾಲ್ವರು ಲಂಚಕ್ಕೆ ಬೇಡಿಕೆ ಇಟ್ಟಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ  ನಾಲ್ವರ ಮೇಲೆ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಕಾಂಗ್ರೆಸ್ ಮಾಜಿ ಶಾಸಕ ಎಂ.ಎಂ. ಸಜ್ಜನ್  ನಿಧನ
ಮುಂದಿನ ಲೇಖನಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ