ಮನೆ ಅಪರಾಧ ಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

ಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

0

ಮೈಸೂರು: ಬೆಮೆಲ್ ಕಾರ್ಖಾನೆಯ ಖಾಸಗೀಕರಣ ವಿರೋಧಿಸಿ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಬೆಮೆಲ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಎಚ್.ವೈ. ಮುನಿರೆಡ್ದಿ ಮಾತನಾಡಿ, ಸುಮಾರು 8 ಸಾವಿರ ಕಾರ್ಮಿಕರನ್ನು ಹೊಂದಿರುವ ಬೆಮೆಲ್ 1964ರಿಂದಲೂ ಲಾಭದಾಯಕ ಉದ್ದಿಮೆ ಎನಿಸಿದೆ. ದೇಶದ ರಕ್ಷಣಾ ವಲಯ, ಗಣಿ , ರಸ್ತೆ, ರೈಲ್ವೆ ಮತ್ತು ಮೆಟ್ರೊ ವಿಭಾಗಗಳಿಗೆ ಗಣನೀಯವಾಗಿ ಕೊಡುಗೆ ನೀಡಿದೆ. ಇಂತಹ ಉದ್ದಿಮೆಯನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.

ಫೆ.5ರವರೆಗೂ ಕಾರ್ಖಾನೆಯ ಮುಖ್ಯದ್ವಾರದ ಬಳಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಸಂಘದ ಉಪಾಧ್ಯಕ್ಷ ಗೋವಿಂದರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಡಿ. ರಾಜಶೇಖರಮೂರ್ತಿ, ಸಹ ಕಾರ್ಯದರ್ಶಿ ಸುರೇಶ ಮತ್ತು ಖಜಾಂಚಿ ಎಂ.ಬಿ.ಜಗದೀಶ ಸೇರಿದಂತೆ 800 ಕ್ಕೂ ಅಧಿಕ ಮಂದಿ ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.

ಹಿಂದಿನ ಲೇಖನವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಂಚಕ್ಕೆ ಬೇಡಿಕೆ ಆರೋಪ: ನಾಲ್ವರ ಮೇಲೆ ಎಫ್ಐಆರ್
ಮುಂದಿನ ಲೇಖನ2022-2023ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭ