ಹೊಟ್ಟೆ ನೋವು ಹೊಟ್ಟೆಯಲ್ಲಿ ವಾತ ತುಂಬುವಿಕೆ ಮತ್ತು ಮೇಲಿಂದ ಮೇಲೆ ಹುಳಿ ತೇಗು ಬರುವುದು. ಇದಕ್ಕೆ ಇತ್ತೀಚೆಗೆ ನಾವು ಗ್ಯಾಸ್ಟಿಕ್ ಟ್ರಬಲ್ ಎನ್ನುತ್ತೇವೆ. ನಾವು ತಿಂದ ಆಹಾರವು ಸರಿಯಾಗಿ ಪಚನವಾಗದೆ ಶಥವಾ ಆ ಆಹಾರದಲ್ಲಿ ಈ ವಾತ ಅಥವಾ ಗ್ಯಾಸ್ಟಿಕ್ ಅನ್ನು ಉತ್ಪತ್ತಿ ಮಾಡುವ ಅಂಶ ಹೆಚ್ಚಾಗಿದ್ದರೆ ಅಥವಾ ನಮ್ಮ ಜಠರದಲ್ಲಿ ಆಹಾರವನ್ನು ಕೆಡದಂತೆ ೬ ಗಂಟೆಗಳ ಕಾಲವಿಡುವ ಪಿತ್ತರಸದ ವ್ಯತ್ಯಾಸದಿಂದ ಚೆನ್ನಾಗಿ ಈ ವ್ಯಾಧಿ ಬರುತ್ತದೆ.
ಈ ವ್ಯಾಧಿಯು ಮೂರು ವಿಧದಲ್ಲಿ ಬರುವ ಸಾಧ್ಯತೆ ಇದೆ :
ನಾವು ಸೇವಿಸುವ ಆಹಾರದ ಪರಿಯಿಂದ, ನಾವು ಆಹಾರದಲ್ಲಿ ಮಸಾಲೆಯುಕ್ತವಾದದ್ದನ್ನು ಬಳಸುವುದು,ಕರೆದ ತಿಂಡಿಗಳು ಹೆಚ್ಚು ಸೇವಿಸುವುದು.
ಜೀವನದಲ್ಲಿ ಆತುರ, ಆಹಾರ ಸೇವಿಸುವುದರಿಂದ ಹಿಡಿದು ಎಲ್ಲಾ ಕಾರ್ಯಗಳಲ್ಲೂ ಸಹನೆ ಇಲ್ಲದೆ ಆತುರದಿಂದ ಇರುವುದು.
ನಮ್ಮ ನಿತ್ಯ ಜೀವನದಲ್ಲಿ ಉದ್ವೇಗಕ್ಕೆ ಒಳಗಾಗುವುದು,ಮನೆ, ಸಂಸಾರ ವೃತ್ತಿ ವ್ಯವಹಾರಗಳಲ್ಲಿ ಮಾನಸಿಕವಾಗಿ ಆರೋಗ್ಯ ಕೆಡುವುದು.
ಆಯುರ್ವೇದದಲ್ಲಿ ಪಿತ್ತ ಪ್ರಕೋಪದಿಂದ ಉಂಟಾಗುವ ವ್ಯಾದಿಯನ್ನು ಆಮ್ಲಪಿತ್ತವೆನ್ನುತ್ತಾರೆ ನಾವು ಸೇವಿಸುವ ಆಹಾರವು ಜಠರದಲ್ಲಿ ಹಲವು ಗಂಟೆಗಳ ಕಾಲದವರೆಗೆ ದೇಹದ ಬಿಸಿ ಮತ್ತು ಒತ್ತಡದಿಂದ ಪಚನವಾಗುತ್ತದೆ. ಈ ರೀತಿ ಹಲವು ಗಂಟೆಗಳ ಕಾಲದವರೆಗೆ ಆಹಾರವು ಕೆಡದಂತೆ ಜಠರದಲ್ಲಿ ಇರಬೇಕಾಗುತ್ತದೆ ಅದಕ್ಕಾಗಿಯೇ ನಮ್ಮ ಜಠರ ಗ್ರಂಥಿಗಳಿಗೆ ಪಿತ್ತಕೋಶದಿಂದ ಪಿತ್ತರಸವನ್ನು ಉತ್ಪತ್ತಿ ಮಾಡಿ ಕಳಿಸುತ್ತದೆ.ಆದರೆ ನಾವು ಕೆಲವು ಸಲ ಜಠರಗ್ರಂಥಿಗಳನ್ನು ಉದ್ರೇಕಿಸುವಂತೆ ಆಹಾರವನ್ನು ಸೇವಿಸಿದಾಗ ಸೂಕ್ಷ್ಮ ಜಠರ ಗ್ರಂಥಿಯು ಪೀಡಿತವಾಗಿ ಉಷ್ಣಾಂಶವು ಹೆಚ್ಚಾಗಿ ಸುಡುತ್ತದೆ. ಪಿತ್ತೋದ್ರೇಕವಾಗಿ ಜಠರದಲ್ಲಿ ಆಗ ಪಿತ್ತ ಜನಾಂಗವು ಹೆಚ್ಚು ರಸವನ್ನು ಸ್ರಮಿಸಿ ಅದನ್ನು ಶಮನ ಮಾಡುತ್ತದೆ. ಆದರೆ ಇದರಲ್ಲಿ ಆಮ್ಲೆಟ್ ಹೆಚ್ಚಾಗಿರುವುದರಿಂದ ಅದು ನಮ್ಮ ಆಹಾರದ ಜೊತೆಗೆ ಸೇರಿಸಿದಾಗ ಅದು ವಿರುದ್ಧ ಆಮ್ಲ ಪಿತ್ತವಾಗುತ್ತದೆ. ಇದರಿಂದ ಎದೆ ಉರಿ, ಲಾಲಾರಸ ಹೆಚ್ಚಾಗುವುದು, ಉಳಿತೇಗು, ಎದೆ ಗಂಟಲು ಉರಿ, ಆಹಾರ ಸೇರದೆ,ತಲೆನೋವು ಬರುವ ಸಂಭವ. ಇದರಲ್ಲಿ ಊರ್ಧ್ವಗ ಆಮ್ಲಪಿತ್ತ ಮತ್ತು ಆಧೋಗ ಆಮ್ಲಪಿತ್ತ ಎಂಬ ಎರಡು ವಿಧಗಳಿರುತ್ತದೆ.
ಊರ್ಧ್ವಗ : ಇದು ಕಫ ಪ್ರಧಾನವಾಗಿದ್ದು,ವಾಂತಿ ಕಹಿ ಅಥವಾ ಹುಳಿತೇಗು, ಎದೆ ಹಾಗೂ ಹೊಟ್ಟೆಯಲ್ಲಿ ಉರಿಯ ಅನುಭವ ತಲೆನೋವು, ಪಾದ ಮತ್ತು ಅಂಗೈಯಲ್ಲಿ ಉರಿ ಅಥವಾ ಬಿಸಿ ಆಗುವುದು, ಬಾಯಿ ರುಚಿ ಯಿಲ್ಲದಿರುವುದು ಜ್ವರ, ಮೈಯಲ್ಲಿ ತುರಿಕೆ ಕೆಂಪುಗುಳ್ಳೆ ಇತರ ಲಕ್ಷಣಗಳು ಇರುತ್ತದೆ.
ಆಧೋಗ : ಇದು ವಾತ ಪ್ರಧಾನವಾದದ್ದು.ಅತಿಯಾದ ಬಾಯಾರಿಕೆ, ತಲೆ ಸುತ್ತು, ಮೂಚ್ಚೆ ಹೋಗುವುದು, ಮೈಯಲ್ಲಿ ಬಿಸಿ ಯಾಗುವುದು, ಗುದಮಾರ್ಗದಿಂದ ಪಿತ್ತ,ಗಾಳಿ ಹೊರ ಹೋಗುವುದು, ವಾಕರಿಕೆ, ಮೈಯಲ್ಲಿ ಬೆವರು,ಶರೀರದಲ್ಲಿ ಬೊಕ್ಕೆಗಳು ಏಳುವುದು, ಹಸಿವಾಗದೆ ಇರುವುದು, ಶರೀರ ಹಳದಿ ಬಣ್ಣಕ್ಕೆ ತಿರುಗುವುದು ಇತರ ಲಕ್ಷಣಗಳು ಕಾಣಿಸಿಕೊಳ್ಳುವುದು, ಇವಲ್ಲದೆ ದೋಷ ಅಧಿಕವಾದರೆ ಅನುಗುಣವಾಗಿ ವಾತಾಧಿಕ ಪಿತ್ತಾಧಿಕ ಮತ್ತು ಕಫಾಧಿಕ ಎಂಬ ಮೂರು ಬಗೆಯ ತ್ರಿದೋಷಕಗಳಾಗಿ ವಿಂಗಡಿಸಬಹುದು.
ಖಾಧುನಿಕ ವೈದ್ಯ ಪದ್ಧತಿಯಂತೆ ಹೊಟ್ಟೆಯಲ್ಲಿ ಆಮ್ಲಿಯ ಅಂಶದ ಉತ್ಪತ್ತಿಗೆ ಕಾರಣ, ನಾವು ತಿಂದ ಆಹಾರ ಪಚನವಾಗುವುದಕ್ಕೆ ಅತಿ ಮುಖ್ಯವಾಗಿ ಹೈಡ್ರೋಕ್ಲೋರಿಕ್ ಆಮ್ಲ ಬೇಕು. ಅದು ಸರಿಯಾದ ಪ್ರಮಾಣದ ಅನುಗುಣವಾಗಿ ಉತ್ಪತ್ತಿಯು ನಮ್ಮ ಜಠರದಲ್ಲಿ ಆಗುತ್ತದೆ. ಆದರೆ ಕಾರಣಾಂತರದಿಂದ ಹೆಚ್ಚು ಉತ್ಪತ್ತಿಯಾದರೆ ಹೈಪರ್ ಆೄಸಿಡಿಟಿ ಅಥವಾ ಆೄಸಿಡ್ ಡಿಸ್ಪೆಪ್ಲಿಯಾ ಎನ್ನುತ್ತಾರೆ. ಇದರಲ್ಲಿ ಪ್ರ್ಮರಿಯೆ ಮತ್ತು ಸೆಕೆಂಡರಿ ಹೈಪರ್ ಎಂದು ಎರಡು ವಿಧ ಅಪಾನವಾತ, ವಾಯುಪ್ರಕೋಪ ಪ್ರತಿದಿನ ಗುದ ಧ್ವಾರದಿಂದ ಹೊರಹಾಕುತ್ತಾನೆ.ಪ್ರತಿಯೊಬ್ಬರ ಜಠರ ಮತ್ತು ಕರುಳಿನಲ್ಲಿ ಸ್ವಲ್ಪ ಮುಟ್ಟಿನ ಗ್ಯಾಸ್ ಸಂಚಯ ಆಗುತ್ತಿರುತ್ತದೆ.ಸಾಮಾನ್ಯ ಮನುಷ್ಯರಿಗೆ ದಿನಕ್ಕೆ ಸುಮಾರು 14 ಬಾರಿ ಗ್ಯಾಸ್ ಗುದದ್ವಾರದಿಂದ ಹೊರ ಹಾಕುತ್ತದೆ. ಇದಕ್ಕಿಂತ ಹೆಚ್ಚಾದರೆ ತೊಂದರೆ, ಸಾಮಾನ್ಯ ಕರುಳಿನ ಸಾಮಾನ್ಯವಾಗಿ ದಿನದಲ್ಲಿ 500 ರಿಂದ 2000 ಘಣ ಮಿಲಿ ಮಿಟರ್ ಗ್ಯಾಸ್ ಉತ್ಪಾದನೆಯಾಗುತ್ತದೆ. ಇದು ಗುದದ್ವಾರದ ಮೂಲಕ ಹೊರ ಹೋಗುತ್ತದೆ. ಸಾಮಾನ್ಯವಾಗಿ ಐದು ರೀತಿಯ ವಾಸನೆರಹಿತ ಗ್ಯಾಸ್ ಗಳಾಗಿರುತ್ತದೆ. ಅವು ನೈಟ್ರೋಜನ್, ಹೈಡ್ರೋಜನ್,ಕಾರ್ಬನ್ ಡೈ ಆಕ್ಸೈಡ್, ಮತ್ತು ಮಿಥೇನ್ ಆಕ್ಸಿಜನ್ ಇದಲ್ಲದೆ ವಿಶಿಷ್ಟ ವಾಸನೆಯುಳ್ಳ ಸ್ಕೇಟೋಲ್, ಇಂಡೋಲ್ ಮತ್ತು ರಂಜಕಯುಕ್ತ ಗ್ಯಾಸ್ ಗಳು ಉದರದಲ್ಲಿ ಉತ್ಪತ್ತಿಯಾಗುತ್ತದೆ .
ಹೈಡ್ರೋಜನ್ ಮತ್ತು ಮಿಥೇನ್ ಗ್ಯಾಸ್ ಇಂದ ಉರಿಯುವ ಗುಣವಿರುವ ಗ್ಯಾಸ್ ನಿಂದ ನೀವು ಬಳಲುತ್ತಿರಿ. ಈ ಉದರ ಗ್ಯಾಸ್ ನೇರವಾಗಿ ನಮ್ಮ ಕರುಳಿನ ಬ್ಯಾಕ್ಟೀರಿಯಗಳ ಮೇಲೆ ಪರಿಣಾಮ ಬೀರುತ್ತದೆ.ಆದ್ದರಿಂದ ಆಹಾರ ಕೆಟ್ಟು ಹುಳಿಯಾಗುವಿಕೆ, ಜೀರ್ಣ ಕ್ರಮ ಹೀರುವಿಕೆ ಇತ್ಯಾದಿಯ ಮೇಲೆ ಅವಲಂಬಿಸಿರುತ್ತದೆ. ವಿವಿಧ ರೀತಿಯ ವಾಸನೆಯು ನಾವು ಸೇವಿಸುವ ಆಹಾರ ಮತ್ತು ಅದರ ಪ್ರಮಾಣದಂತೆ ಅವಲಂಬಿಸಿರುತ್ತದೆ.
ಬರುವುದಕ್ಕೆ ಕಾರಣ : ಆಹಾರದಲ್ಲಿ ನಾರಿನಾಂಶ ಕೊರತೆ, ಹೊಟ್ಟೆಯಲ್ಲಿ ಹುಳುಗಳು ಕರುಳಿನ ಊತ, ಕರುಳಿನಲ್ಲಿ ತಡೆ, ಥೈರಾಯಿಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದು, ಮಾದಕ ಪಾನೀಯ ಸೇವನೆ.