ಮನೆ ರಾಷ್ಟ್ರೀಯ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: 6 ಮಂದಿ ಸಾವು

ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: 6 ಮಂದಿ ಸಾವು

0

ಹೈದರಾಬಾದ್‌: ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಓರ್ವ ಮಹಿಳೆ ಸಹಿತ ಆರು ಮಂದಿ ಮೃತ‍‍ಪಟ್ಟಿರುವ ಘಟನೆ ಸಿಕಂದರಾಬಾದ್‌’ನಲ್ಲಿ ನಡೆದಿದೆ.

ಸಾವಿಗೆ ನಿಖರ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದ್ದು, ಹೊಗೆ ದಟ್ಟೈಸಿದ್ದರಿಂದ ಉಸಿರುಗಟ್ಟಿ ಸಾವಿಗೀಡಾಗಿರಬಹುದು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. 12 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಈ ಪೈಕಿ 6 ಮಂದಿ ಸಾವಿಗೀಡಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರೆಲ್ಲರೂ ತೆಲಂಗಾಣದ ವಾರಂಗಲ್‌ ಹಾಗೂ ಖಮ್ಮನ್‌ ಜಿಲ್ಲೆಯವರಾಗಿದ್ದು, ಕಟ್ಟಡದಲ್ಲಿದ್ದ ಮಾರ್ಕೆಂಟಿಂಗ್‌ ಕಂಪನಿಯಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಸಂಜೆ 7.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ.

ಹಿಂದಿನ ಲೇಖನಬೆಂಗಳೂರು ರೇಸ್‌ ಕೋರ್ಸ್‌ ರಸ್ತೆಗೆ ನಟ ಅಂಬರೀಶ್‌ ಹೆಸರಿಡಲು ಬಿಬಿಎಂಪಿ ಅಸ್ತು
ಮುಂದಿನ ಲೇಖನಮುಲ್ಕಿ ನಗರ ಪಂಚಾಯತ್‌’ನ ಜೂ.ಇಂಜಿನಿಯರ್ ಗೆ 4 ವರ್ಷ ಜೈಲು