ಮನೆ ತಂತ್ರಜ್ಞಾನ ಬೇಸಿಗೆಯಲ್ಲಿ ಮೊಬೈಲ್ ಬಿಸಿ ಆಗೋದನ್ನು ತಡೆಯಲು ಈ 6 ಸಲಹೆಗಳನ್ನು ಪಾಲಿಸಿ

ಬೇಸಿಗೆಯಲ್ಲಿ ಮೊಬೈಲ್ ಬಿಸಿ ಆಗೋದನ್ನು ತಡೆಯಲು ಈ 6 ಸಲಹೆಗಳನ್ನು ಪಾಲಿಸಿ

0

ದೀರ್ಘಕಾಲದವರೆಗೆ ಸ್ಮಾರ್ಟ್’ಫೋನ್ ಬಳಸಿದ್ರೆ ಅದು ಬಿಸಿ ಆಗುತ್ತದೆ. ಕೆಲವೊಮ್ಮೆ ಚಾರ್ಜಿಂಗ್ ಹಾಕಿದಾಗಲೂ ಅದು ಬಿಸಿ ಆಗೋದು ಉಂಟು. ಈಗ ಬೇಸಿಗೆ ಆರಂಭವಾಗಿದ್ದು ಸಹಜ ತಾಪಮಾನದಲ್ಲಿ ಸ್ಮಾರ್ಟ್’ಫೋನ್ ಬಿಸಿ ಆಗುತ್ತವೆ.

ಸ್ಮಾರ್ಟ್’ಫೋನ್’ಗಳು ಸಾಮಾನ್ಯ ತಾಪಮಾನದಲ್ಲಿ ಬಿಸಿ ಆಗುತ್ತವೆ. ಈ ಸಮಯದಲ್ಲಿ ಬ್ಯಾಟರಿ ಮತ್ತು ಸ್ಮಾರ್ಟ್’ಫೋನ್ ಕಾರ್ಯಾಚರಣೆಯಲ್ಲಿ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಸ್ಮಾರ್ಟ್’ಫೋನ್ ಕೂಲ್ ಆಗಿರಿಸಲು ಪ್ರಯತ್ನಿಸಬೇಕು.

ಕಾರನ್ನು ನಿಲ್ಲಿಸುವಾಗ ಮತ್ತು ಲಾಕ್ ಮಾಡುವಾಗ ಅನೇಕ ಜನರು ತಮ್ಮ ಸ್ಮಾರ್ಟ್’ಫೋನ್ ಅನ್ನು ಕಾರಿನಲ್ಲಿ ಇಡುತ್ತಾರೆ. ಬೇಸಿಗೆಯಲ್ಲಿ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗುತ್ತದೆ ಎಂಬುದು ಗಮನಾರ್ಹ. ಇಂತಹ ಬಿಸಿ ವಾತಾವರಣದಲ್ಲಿ ಸೆಲ್ ಫೋನ್ ಬ್ಯಾಟರಿ ಹಾಳಾಗುವ ಸಾಧ್ಯತೆ ಇರುತ್ತದೆ. 35 ಡಿಗ್ರಿಗಿಂತ ಹೆಚ್ಚಿನ ತಾಪಮಾನದ ಸ್ಥಿತಿಯಲ್ಲಿ ಇರಿಸಿದಾಗ ಐಫೋನ್ ಬ್ಯಾಟರಿಗಳು ವಿಶೇಷವಾಗಿ ಪರಿಣಾಮ ಬೀರುತ್ತವೆ ಎಂದು ಗಮನಿಸಬೇಕು.

ವಾಹನ ಚಾಲನೆ ಮಾಡುವಾಗ ಡ್ಯಾಶ್ ಬೋರ್ಡ್ ಮೇಲೆ ಫೋನ್ ಇಟ್ಟುಕೊಳ್ಳುವ ಅಭ್ಯಾಸ ಅನೇಕರಿಗೆ ಇರುತ್ತದೆ. ಸೂರ್ಯನ ಬೆಳಕಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ, ಸ್ಮಾರ್ಟ್’ಫೋನ್’ನ ತಾಪಮಾನವು ಹೆಚ್ಚಾಗಬಹುದು ಮತ್ತು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು.

ಸ್ಮಾರ್ಟ್’ಫೋನ್’ಗಳು ಇತರೆ ವಸ್ತುವಿನಂತೆ ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ಸಾಧ್ಯವಾದಷ್ಟು ನಿಮ್ಮ ಸ್ಮಾರ್ಟ್’ಫೋನ್ ಅನ್ನು ಸೂರ್ಯನ ಬೆಳಕಿಗೆ ಒಡ್ಡುವುದನ್ನು ತಪ್ಪಿಸಿ. ಸ್ಮಾರ್ಟ್’ಫೋನ್ ಅನ್ನು ತಂಪಾದ, ಶುಷ್ಕ ಸ್ಥಳದಲ್ಲಿರಿಸಿ ಚಾರ್ಜ್ ಮಾಡಬಹುದು. ಚಾರ್ಜ್ ಮಾಡುವಾಗ ಕೆಲವು ಫೋನ್’ಗಳು ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತವೆ ಎಂಬುದು ನಿಮಗೆ ಗೊತ್ತಿರಲಿ.

ಬಿಸಿಲಿನಲ್ಲಿ ದೀರ್ಘಕಾಲದವರೆಗೆ ಸ್ಮಾರ್ಟ್’ಫೋನ್ ಬಳಕೆ ಮಾಡೋದರಿಂದ ಬಿಸಿ ಹೆಚ್ಚಾಗುತ್ತದೆ. ನೀವು ಹೊರಗಡೆ ಇದ್ದಾಗ ನೇರವಾಗಿ ಸೂರ್ಯನ ಬೆಳಕಿಗೆ ಒಡ್ಡದಂತೆ ನೋಡಿಕೊಳ್ಳಿ. ನೆರಳಿನಲ್ಲಿ ನಿಂತು ಸ್ಮಾರ್ಟ್’ಫೋನ್ ಬಳಕೆ ಮಾಡಲು ಪ್ರಯತ್ನಿಸಿ.

ಬಹುತೇಕರು ರಾತ್ರಿಯೆಲ್ಲಾ ತಮ್ಮ ಸ್ಮಾರ್ಟ್’ಫೋನ್ ಚಾರ್ಜ್ ಮಾಡುತ್ತಾರೆ. ಸದ್ಯ ಸ್ಮಾರ್ಟ್’ಫೋನ್’ಗಳು ಚಾರ್ಜ್ ಪೂರ್ಣಗೊಂಡ ನಂತರ ಸ್ವಯಂಚಾಲಿತವಾಗಿ ಚಾರ್ಜ್ ಅನ್ನು ಕಡಿತಗೊಳಿಸುವ ಸೌಲಭ್ಯವನ್ನು ಹೊಂದಿವೆ. ಆದರೆ, ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಬ್ಯಾಟರಿ ಹಾಳಾಗುವ ಸಂಭವವಿದ್ದು, ಸ್ಮಾರ್ಟ್ ಫೋನ್ ನ ತಾಪಮಾನವೂ ಹೆಚ್ಚಾಗಬಹುದು.

ನಿಮ್ಮ ಸ್ಮಾರ್ಟ್ ಫೋನ್ ತುಂಬಾ ಬಿಸಿಯಾಗಿದೆ ಎಂದು ಅನ್ನಿಸಿದ್ರೆ ನಿಮ್ಮ ಫೋನ್ ಕವರ್ ಅನ್ನು ತೆಗೆಯಿರಿ. ಫೋನ್ ಗಾಳಿಗೆ ಇರಿಸೋದರಿಂದ ಕೂಲ್ ಆಗುತ್ತದೆ.

ಹಿಂದಿನ ಲೇಖನಪಂಚಮಸಾಲಿ ಮೀಸಲಾತಿ: ಯಥಾಸ್ಥಿತಿ ಆದೇಶ ತೆರವುಗೊಳಿಸಿದ ಹೈಕೋರ್ಟ್; ಮೀಸಲಾತಿ ಕಲ್ಪಿಸಲು ಇದ್ದ ಅಡ್ಡಿ ನಿವಾರಣೆ
ಮುಂದಿನ ಲೇಖನಬಿ.ಎಸ್.ಯಡಿಯೂರಪ್ಪ ಮನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ