ಮನೆ ತಂತ್ರಜ್ಞಾನ ನಿಮ್ಮ ಮೊಬೈಲ್ ಡೇಟಾ ಬೇಗ ಖಾಲಿಯಾಗುತ್ತಿದ್ದರೆ ಈ ಟ್ರಿಕ್ ಫಾಲೋ ಮಾಡಿ

ನಿಮ್ಮ ಮೊಬೈಲ್ ಡೇಟಾ ಬೇಗ ಖಾಲಿಯಾಗುತ್ತಿದ್ದರೆ ಈ ಟ್ರಿಕ್ ಫಾಲೋ ಮಾಡಿ

0

ಸ್ಮಾರ್ಟ್​ ಫೋನ್ ಇಂದು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಮ್ಮ ಜೊತೆಗೆ ಇರುವುದರಿಂದ ಇದು ಜೀವನದ ಭಾಗವಾಗಿಬಿಟ್ಟಿವೆ. ಇಂಟರ್ನೆಟ್ ಬೆಲೆ ಏರುತ್ತಿದ್ದರೂ ಇದರ ಬಳಕೆ ಮಾತ್ರ ಹೆಚ್ಚುತ್ತಲೇ ಇದೆ. ಆದರೆ ಕೆಲವು ಕಾರಣಗಳಿಂದಾಗಿ ನಾವು ಬಳಸುವ ಮೊಬೈಲ್ ಡೇಟಾ ತ್ವರಿತವಾಗಿ ಖಾಲಿ ಆಗುತ್ತದೆ.

Join Our Whatsapp Group

ಸ್ಮಾರ್ಟ್ ​ಫೋನ್​ ಗಳಲ್ಲಿ ಕೆಲವು ಆ್ಯಪ್​ ಗಳು ಸ್ವಯಂಚಾಲಿತವಾಗಿ ಅಪ್​ ಡೇಟ್ ಆಗುತ್ತವೆ. ಇದರಿಂದಾಗಿ ಇಂಟರ್ನೆಟ್ ಡೇಟಾ ಬೇಗನೆ ಖಾಲಿ ಆಗುತ್ತದೆ. ಅದಕ್ಕಾಗಿಯೇ ನೀವು ಅಪ್ಲಿಕೇಶನ್ ಸೆಟ್ಟಿಂಗ್‌ ಗಳಿಗೆ ತೆರಳಿ ಅಟೋಮೆಟಿಕ್ ಡೌನ್‌ ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ವೈಫೈ ಬಳಸುವಾಗ ಅಪ್ಲಿಕೇಶನ್‌ ಗಳನ್ನು ನವೀಕರಿಸುವುದು ಉತ್ತಮ.

ಆಂಡ್ರಾಯ್ಡ್ ಫೋನ್‌ ಗಳು ಡೇಟಾ ಉಳಿತಾಯ ಮೋಡ್ ಎಂಬ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಆಯ್ಕೆಯನ್ನು ಹೊಂದಿರುವವರು ಅದನ್ನು ಸಕ್ರಿಯಗೊಳಿಸಿದರೆ ಡೇಟಾವನ್ನು ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ವೈಶಿಷ್ಟ್ಯದ ಸಹಾಯದಿಂದ, ಸಾಧ್ಯವಾದಷ್ಟು ಡೇಟಾವನ್ನು ಉಳಿಸಲು ಅವಕಾಶವಿದೆ. ಇತ್ತೀಚಿಗೆ ಗೂಗಲ್ ಮ್ಯಾಪ್ ಬಳಕೆ ತುಂಬಾ ಹೆಚ್ಚಾಗಿದೆ. ಇವುಗಳು ಹೆಚ್ಚಿನ ಡೇಟಾವನ್ನು ಸಹ ತಿನ್ನುತ್ತದೆ. ಆದರೆ, ಇಂತಹ ಆ್ಯಪ್​ಗಳನ್ನು ಆಫ್ ಲೈನ್ ಮೋಡ್​ ನಲ್ಲಿ ಬಳಸಬೇಕೇ ಹೊರತು ಆನ್ ಲೈನ್ ಮೋಡ್​ ನಲ್ಲಿ ಅಲ್ಲ. ಇದು ಇಂಟರ್ನೆಟ್ ಡೇಟಾವನ್ನು ಸಾಧ್ಯವಾದಷ್ಟು ಉಳಿಸುತ್ತದೆ.

ನಾವು ಸಾಮಾನ್ಯವಾಗಿ ನಮ್ಮ ಪ್ರಯಾಣದ ಸಮಯದಲ್ಲಿ OTT ಪ್ಲಾಟ್‌ ಫಾರ್ಮ್‌ ಗಳು ಅಥವಾ ಯೂಟ್ಯೂಬ್​ ನಲ್ಲಿ ವಿಡಿಯೋಗಳನ್ನು ಸ್ಟ್ರೀಮ್ ಮಾಡುತ್ತೇವೆ. ಆದರೆ, ಅದರ ಹೊರತಾಗಿ ವೈಫೈ ಎಲ್ಲಿಯಾದರೂ ಲಭ್ಯವಿದ್ದಾಗ ಕೆಲವು ವಿಡಿಯೋಗಳನ್ನು ಡೌನ್ ​ಲೋಡ್ ಮಾಡಿಟ್ಟರೆ ಆಫ್‌ಲೈನ್ ಮೋಡ್‌ನಲ್ಲಿ ವೀಕ್ಷಿಸಿ ಮೊಬೈಲ್ ಫೋನ್ ಡೇಟಾವನ್ನು ಉಳಿಸಬಹುದು.

ಡೇಟಾ ಖಾಲಿಯಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ವಾಟ್ಸ್​ ಆ್ಯಪ್ ​ನಲ್ಲಿ ಸಿಕ್ಕ ಸಿಕ್ಕ ಫೋಟೋ, ವಿಡಿಯೋಗಳನ್ನು ಡೌನ್‌ ಲೋಡ್ ಮಾಡುವುದು. ವಿಡಿಯೋಗಳು ಮತ್ತು ಫೋಟೋಗಳನ್ನು ಅಟೋಮೆಟಿಕ್ ಡೌನ್​ ಲೋಡ್ ಆಯ್ಕೆಯಿಂದ ತೆಗೆಯಿರಿ. ಇಲ್ಲವಾದರೆ ಇದು ಡೇಟಾವನ್ನು ವೇಗವಾಗಿ ಪೂರ್ಣಗೊಳಿಸುತ್ತದೆ. ಆದ್ದರಿಂದ ನೀವು ವಾಟ್ಸ್​ಆ್ಯಪ್ ಸೆಟ್ಟಿಂಗ್‌ ಗಳಿಗೆ ಹೋಗಿ ಸ್ವಯಂಚಾಲಿತ ಡೌನ್‌ ಲೋಡ್ ಅನ್ನು ಆಫ್ ಮಾಡುವ ಮೂಲಕ ಡೇಟಾವನ್ನು ಉಳಿಸಬಹುದು.

ಹಿಂದಿನ ಲೇಖನಟ್ರಾಕ್ಟರ್ ಚಾಲಕನ ಮೇಲೆ ಹಲ್ಲೆ ಪ್ರಕರಣ: ಮಸ್ಕಿ ಪೊಲೀಸ್​ ಠಾಣೆ ಪಿಎಸ್ ​​ಐ ಮಣಿಕಂಠ ಅಮಾನತು
ಮುಂದಿನ ಲೇಖನಕೆಎಸ್‌ ಆರ್‌ ಟಿಸಿ ಬಸ್- ಕಾರು ನಡುವೆ ಭೀಕರ ಅಪಘಾತ: ನಾಲ್ವರ ಸಾವು