ಮೊಬೈಲ್ ಕಳವಾದಾಗ ಅತ್ಯಂತ ಮುಖ್ಯ ಮಾಹಿತಿಗಳು (ಡೇಟಾ) ಸೋರಿಕೆಯಾಗುವ ಸಂಭವ ಹೆಚ್ಚಾಗಿರುತ್ತದೆ.
ಆದರೆ, ಇನ್ಮುಂದೆ ನಿಮ್ಮ ಸ್ಮಾರ್ಟ್ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಮೊಬೈಲ್ ಅನ್ನು ಬ್ಲಾಕ್ ಮಾಡಲು ಕರ್ನಾಟಕ ಪೊಲೀಸ್ ಇಲಾಖೆ ಆರಂಭಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್ ಸಹಾಯ ಮಾಡಲಿದೆ. ನಿಮ್ಮ ಬಳಿ ಇನ್ನೊಂದು ಮೊಬೈಲ್ ಇದ್ದರೆ ಅಥವಾ ಮನೆಯವರದ್ದು, ಸ್ನೇಹಿತರ ಮೊಬೈಲ್‌ನಲ್ಲಿ ಈ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿ ಬ್ಲಾಕ್ ಮಾಡಿ ದೂರು ದಾಖಲಿಸಬಹುದು.
ಈ ಬಗ್ಗೆ ಬೆಂಗಳೂರು ನಗರ ಪೊಲೀಸರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಯಾವರೀತಿ ನೋಂದಣಿ ಮಾಡಬೇಕು ಎಂಬ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರು ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ ನಿಂದ KSP Application ಡೌನ್ ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು.
ಮೊಬೈಲ್ ದೂರನ್ನು E-Lost ನಲ್ಲಿ ವರದಿ ಮಾಡಲು KSP Application ಅನ್ನು ಓಪನ್ ಮಾಡಿಕೊಳ್ಳಿ. ಅಲ್ಲಿಂದ E-Lost ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
ಈಗ E-Lost ವರದಿಯನ್ನು ನೊಂದಾಯಿಸಿಕೊಂಡು ಈ ಆಪ್ಶನ್ ಅನ್ನು ಆಯ್ಕೆ ಮಾಡಿರಿ.
ಬಳಿಕ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿ ನೊಂದಾಯಿಸಿರಿ. ನಂತರ ಮುಂದಿನ ಆಪ್ಶನ್ ಆಯ್ಕೆ ಮಾಡಿಕೊಳ್ಳಿ.
ನಿಮ್ಮ ಮೊಬೈಲ್‌ನ ಬಿಲ್ ಇದ್ದರೆ ಅದನ್ನು ಅಪ್‌ಲೋಡ್ ಮಾಡಿ ನಂತರ ನೆಕ್ಸ್ಟ್ ಒತ್ತಿರಿ
ಇದಾದ ಬಳಿಕ ಮೊಬೈಲ್ ಆಪ್ಶನ್ ಆಯ್ಕೆ ಮಾಡಿಕೊಳ್ಳಿ
ಮೊಬೈಲ್ ಮಾಹಿತಿಯನ್ನು ನೋಂದಾಯಿಸಿ. ಬಳಿಕ ಆಡ್ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಿರಿ
ಕೊನೆಯಲ್ಲಿ ಮೊಬೈಲ್ ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ನೀಡಿ ಸಬ್ಮಿಟ್ ಆಪ್ಶನ್ ಆಯ್ಕೆ ಮಾಡಿಕೊಳ್ಳಿ. ನಿಮಗೆ ಅದರಲ್ಲಿಯೇ ರಶೀದಿಯೂ ಸಿಗಲಿದೆ. ಅದನ್ನು ಡೌನ್ ಲೋನ್ ಮಾಡಿ ಇಟ್ಟುಕೊಳ್ಳಿರಿ.
ಸಂಚಾರ್ ಸಾಥಿ ಪೋರ್ಟಲ್
ಕಳೆದ ವರ್ಷಗಳಿಂದ ಮೊಬೈಲ್ ಕಳ್ಳತನ ದೇಶದಲ್ಲಿ ಗಣನೀಯವಾಗಿ ಏರಿಕೆ ಆಗುತ್ತಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಕೂಡ ಜನರ ಫೋನ್ ಮತ್ತು ಡೇಟಾ ಕಳ್ಳತನಕ್ಕೆ ಪರಿಹಾರ ಕಂಡುಹಿಡಿದಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ”ಸಂಚಾರ್ ಸಾಥಿ ಪೋರ್ಟಲ್” ಅನ್ನು ಪ್ರಾರಂಭಿಸಸಿದದೆ. ಸಂಚಾರ್ ಸಾಥಿ ಪೋರ್ಟಲ್ ಅಡಿಯಲ್ಲಿ, ಬಳಕೆದಾರರು ತಮ್ಮ ಫೋನ್ ಅನ್ನು ಎಲ್ಲಿದೆ ಎಂದು ಹುಡುಕಬಹುದು ಅಥವಾ ಸ್ವಿಚ್ ಆಫ್ ಮಾಡಬಹುದು. ಆ್ಯಪಲ್ ಐಫೋನ್ ನಲ್ಲಿರುವ ಫೈಂಡ್ ಮೈ ಫೋನ್ ವೈಶಿಷ್ಟ್ಯದಂತೆ ಇದು ಆಂಡ್ರಾಯ್ಡ್ ಫೋನ್ನಲ್ಲಿ ಕಾರ್ಯನಿರ್ವಹಿಸಲಿದೆ.
ವಿಜಯನಗರ ವಾರ್ಡ್ ನಂಬರ್ 20ರಲ್ಲಿ ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.