ಮನೆ ಕ್ರೀಡೆ ಫುಟ್ಬಾಲ್ ಕ್ಷೇತ್ರದ ದಿಗ್ಗಜ ಕ್ರೀಡಾಪಟು ಸುಭಾಷ್ ಭೌಮಿಕ್ ನಿಧನ

ಫುಟ್ಬಾಲ್ ಕ್ಷೇತ್ರದ ದಿಗ್ಗಜ ಕ್ರೀಡಾಪಟು ಸುಭಾಷ್ ಭೌಮಿಕ್ ನಿಧನ

0

ಕೋಲ್ಕತ್ತಭಾರತ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ, ಕೋಚ್ ಆಗಿದ್ದ ಸುಭಾಷ್ ಭೌಮಿಕ್ (72) ದೀರ್ಘಾವಧಿಯ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ. 

ಈ ವಾರ್ತೆಯನ್ನು ಸುಭಾಷ್ ಭೌಮಿಕ್ ಅವರ ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ. 1970 ರಲ್ಲಿ ಕಂಚು ಪದಕ ಗೆದ್ದಿದ್ದ ಏಷ್ಯನ್ ಗೇಮ್ಸ್ ತಂಡದಲ್ಲಿ ಸುಭಾಷ್ ಭೌಮಿಕ್ ಮಿಡ್ ಫೀಲ್ಡರ್ ಆಗಿದ್ದರು.  ಫುಟ್ಬಾಲ್ ನಿಂದ ನಿವೃತ್ತಿಪಡೆದ ಭೌಮಿಕ್, ತಕ್ಷಣವೇ ತರಬೇತಿದಾರರಾಗಿ ಕಾರ್ಯನಿರ್ವಹಿಸತೊಡಗಿದರು. ಅವರ ಮಾರ್ಗದರ್ಶನದಲ್ಲೇ ASEAN ಕಪ್ ಟೈಟಲ್ ನ್ನು  2003 ಗೆಲ್ಲಲಾಯಿತು. ಪೂರ್ವ ಬಂಗಾಳಕ್ಕೆ ಮೂರು ರಾಷ್ಟ್ರೀಯ ಲೀಗ್ ಟೈಟಲ್ ಗಳನ್ನು ಗೆಲ್ಲುವುದಕ್ಕೂ ಸುಭಾಷ್ ಭೌಮಿಕ್ ತರಬೇತಿ ನೀಡಿದ್ದರು.

ಹಿಂದಿನ ಲೇಖನಫೆಬ್ರವರಿ 24ಕ್ಕೆ ‘ವಿಕ್ರಾಂತ್ ರೋಣ’ ತೆರೆಗೆ
ಮುಂದಿನ ಲೇಖನಅನುದಾನ ತಾರತಮ್ಯ: ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಾಂಗ್ರೆಸ್‍ ಶಾಸಕರ ವಾಗ್ದಾಳಿ