ಮನೆ ಮನರಂಜನೆ ಫೆಬ್ರವರಿ 24ಕ್ಕೆ ‘ವಿಕ್ರಾಂತ್ ರೋಣ’ ತೆರೆಗೆ

ಫೆಬ್ರವರಿ 24ಕ್ಕೆ ‘ವಿಕ್ರಾಂತ್ ರೋಣ’ ತೆರೆಗೆ

0

ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ವಿಕ್ರಾಂತ್​ ರೋಣ’ ಚಿತ್ರವು ಈ ಮೊದಲಿನ ಪ್ಲ್ಯಾನ್ ನಂತೆಯೇ ಫೆಬ್ರವರಿ 24ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. 

ಈ ಸಿನಿಮಾವನ್ನು ಪ್ಯಾನ್​ ಇಂಡಿಯಾ ಬಿಡುಗಡೆ ಮಾಡುವತ್ತ ಚಿತ್ರತಂಡ ಚಿಂತನೆ ನಡೆಸಿದ್ದು, ನಿಗದಿತ ವೇಳಾಪಟ್ಟಿಯಂತೆ ಫೆಬ್ರವರಿ 24 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ 3ಡಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ ಎಂದು ನಿರ್ಮಾಪಕ ಮಂಜುನಾಥ್ ಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

“ವಾರಾಂತ್ಯದ ಕರ್ಫ್ಯೂವನ್ನು ಸಡಿಲಗೊಳಿಸಿದ ಕರ್ನಾಟಕ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ ಮತ್ತು ರಾತ್ರಿ ಕರ್ಫ್ಯೂನಿಂದವೂ ಶೀಘ್ರದಲ್ಲೇ ಮುಕ್ತಿ ಸಿಗುವ ನಿರೀಕ್ಷೆಗಳೂ ಇವೆ ಎಂದು ಹೇಳಿದ್ದಾರೆ.

‘ರಂಗಿತರಂಗ’ ಖ್ಯಾತಿಯ ಅನೂಪ್​ ಭಂಡಾರಿ ಚಿತ್ರ ನಿರ್ದೇಶನ ಮಾಡಿದ್ದು, ಅಡ್ವೆಂಚರ್ ಕಮ್ ಆಕ್ಷನ್ ಡ್ರಾಮಾ ಆಗಿರುವ ಈ ಚಿತ್ರದತ್ತ ಎಲ್ಲರ ಗಮನ ನೆಟ್ಟಿದೆ. 

ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಝೀ ಸ್ಟುಡಿಯೋಸ್ ಪ್ರಸ್ತುತಪಡಿಸುವ ಈ ಬಹುಭಾಷಾ ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್​ ಪಾಂಡಿಯನ್​ ಬಂಡವಾಳ ಹೂಡಿದ್ದಾರೆ. 

ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬಂದಿದೆ,

ಈ ಹಿಂದೆ ವಿಕ್ರಾಂತ್ ರೋಣ ಚಿತ್ರಕ್ಕೆ ಓಟಿಟಿಯಿಂದ ರೂ.100 ಕೋಟಿ ಆಫರ್ ಬಂದಿದ್ದು, ಈ ಆಫರ್ ನ್ನು ಚಿತ್ರತಂಡ ನಿರಾಕರಿಸಿತ್ತು. ಚಿತ್ರವನ್ನು ಓಟಿಟಿ ಬದಲಿದೆ ಚಿತ್ರಮಂದಿರಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. 

ಹಿಂದಿನ ಲೇಖನಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನ: ಸ್ಪಷ್ಟ ನಿಲುವು ತಳೆಯಲು ಸಹಕಾರಿ: ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಫುಟ್ಬಾಲ್ ಕ್ಷೇತ್ರದ ದಿಗ್ಗಜ ಕ್ರೀಡಾಪಟು ಸುಭಾಷ್ ಭೌಮಿಕ್ ನಿಧನ