ಮನೆ ಮನರಂಜನೆ ತಡವಾಗಲಿದೆ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಮಾರ್ಟಿನ್ ಸಿನಿಮಾ ರಿಲೀಸ್

ತಡವಾಗಲಿದೆ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಮಾರ್ಟಿನ್ ಸಿನಿಮಾ ರಿಲೀಸ್

0
https://www.youtube.com/channel/UCmDoYGj_oDaxpT_t7Pa9iEQ

ಬೆಂಗಳೂರು (Bengaluru): ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ಸೆಪ್ಟೆಂಬರ್ 30ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿತ್ತು. ಆದರೆ ಇದೀಗ ರಿಲೀಸ್ ದಿನಾಂಕ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.

ಚಿತ್ರದ ಬಹುತೇಕ ಶೂಟಿಂಗ್ ಮುಗಿದೆ. ಇನ್ನೂ ಆ್ಯಕ್ಷನ್ ದೃಶ್ಯಗಳು ಮಾತ್ರವೇ ಬಾಕಿ ಇದೆ. ಹೀಗಾಗಿ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಲಿದೆ ಎನ್ನಲಾಗುತ್ತಿದೆ.

ಸ್ಟಂಟ್ ಮಾಸ್ಟರ್ ರವಿ ವರ್ಮಾ ಈ ಆಕ್ಷನ್​ಸೀನ್​ಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ರವಿ ವರ್ಮಾ ಮಾತ್ರ ಅಲ್ಲ, ದಕ್ಷಿಣ ಭಾರತೀಯ ಹೆಸರಾಂತ ಸ್ಟಂಟ್ ಮಾಸ್ಟರ್‌ಗಳಾದ ರಾಮ- ಲಕ್ಷ್ಮಣ ಕೂಡ ಈ ಚಿತ್ರತಂಡಕ್ಕೆ ಸಾಥ್​ಕೊಡುತ್ತಿದ್ದಾರೆ. ಕೆಲವು ಆ್ಯಕ್ಷನ್‌ಗಳನ್ನು ಇವರೂ ಕೂಡ ಕಂಪೋಸ್ ಮಾಡುತ್ತಿದ್ದಾರೆ. ಹಾಗಾಗಿ ಈ ಚಿತ್ರದಲ್ಲಿ ಧ್ರುವ ಸರ್ಜಾ ಆಕ್ಷನ್ ಮೇಲೆ ನಿರೀಕ್ಷೆ ಹೆಚ್ಚಿದೆ.

ಆ್ಯಕ್ಷನ್ ಸೀಕ್ವೆಲ್‌ಗಾಗಿ ನಟ ಧ್ರುವ ಸರ್ಜಾ ಭರ್ಜರಿ ತಯಾರಿ ನಡೆಸಿದ್ದಾರೆ. ಇದೇ ಆಗಸ್ಟ್ 5ರಿಂದ ಸಿನಿಮಾದ ಆ್ಯಕ್ಷನ್ ಚಿತ್ರೀಕರಣ ಶುರುವಾಗಲಿದೆ. ಆದಷ್ಟು ಬೇಗ ಚಿತ್ರವನ್ನು ಪೂರ್ಣ ಮಾಡುವ ತವಕದಲ್ಲಿದೆ ಚಿತ್ರತಂಡ. ಇನ್ನು ಈ ಚಿತ್ರದಲ್ಲಿ ನಟ ಧ್ರುವ ಸರ್ಜಾ ಮಸ್ತ್ ಆ್ಯಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ನೋ ಡೌಟ್.

ಧ್ರುವನಿಗೆ ನಾಯಕಿಯಾಗಿ ವೈಭವಿ ನಟಿಸುತ್ತಿದ್ದು, ಬಾಲಿವುಡ್ ನಟ ನಿಕಿತ್, ಅನ್ವೇಶಿ ಜೈನ್ ಸಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಿಂದಿನ ಲೇಖನಭಟ್ಕಳದಲ್ಲಿ ಗುಡ್ಡ ಕುಸಿದು ನಾಲ್ವರ ಸಾವು: ಮೃತದೇಹ ಹೊರತೆಗೆದ ಎನ್ ಡಿಆರ್ ಎಫ್ ಸಿಬ್ಬಂದಿ
ಮುಂದಿನ ಲೇಖನಕರಾಮುವಿ ಕುಲಪತಿ ಮೇಲೆ ಹಲ್ಲೆ ಆರೋಪ