ಮನೆ ಅಪರಾಧ ಲಾರಿಯಿಂದ ಕಳಚಿ ಬಿದ್ದ ಅನಿಲ ತುಂಬಿದ ಟ್ಯಾಂಕರ್: ತಪ್ಪಿದ ಅಪಾಯ

ಲಾರಿಯಿಂದ ಕಳಚಿ ಬಿದ್ದ ಅನಿಲ ತುಂಬಿದ ಟ್ಯಾಂಕರ್: ತಪ್ಪಿದ ಅಪಾಯ

0

ಕುಮಟಾ: ಅನಿಲ ತುಂಬಿದ ಟ್ಯಾಂಕರ್ ಲಾರಿಯಿಂದ ಕಳಚಿ  ಬಿದ್ದಿರುವ ಘಟನೆ ಮಂಗಳವಾರ ಹೊನಮಾಂವ ದೇವಸ್ಥಾನದ ಬಳಿ ಜನವಸತಿ ಪ್ರದೇಶದಲ್ಲಿ ನಡೆದಿದೆ.

ಮಂಗಳೂರಿನಿಂದ ಬೆಳಗಾವಿಗೆ ಸಾಗಿಸುತ್ತಿದ್ದಾಗ ಲಾರಿಯ ಸಂಪರ್ಕ ತಪ್ಪಿದ ಟ್ಯಾಂಕರ್ ಕೆಳಗೆ ಉರುಳಿದೆ. ಆಗ ಟ್ಯಾಂಕರ್‌ನ ಸುರಕ್ಷಿತ ವಾಲ್ವ್ ಸಡಿಲಗೊಂಡು ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿದ್ದು,  ಅದನ್ನು ತಕ್ಷಣ ನಿಲ್ಲಿಸಲಾಯಿತು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಪಟ್ಟಣದ ಗಿಬ್ ವೃತ್ತದ ಸಿದ್ದಾಪುರ – ಚಂದಾವರ ಮಾರ್ಗ ಮೂಲಕ ಹೊನ್ನಾವರದ ಎಲ್.ಐ.ಸಿ ಕಚೇರಿ ಬಳಿ ಹೆದ್ದಾರಿ ಸಂಪರ್ಕಿಸುವಂತೆ ಕ್ರಮ ಕೈಗೊಳ್ಳಲಾಯಿತು.

ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೆರವು‌ ನೀಡಿದರು ಎಂದು ಪಿ.ಎಸ್.ಐ ನವೀನ್ ನಾಯ್ಕ ಮಾಹಿತಿ‌ ನೀಡಿದರು.

ಹಿಂದಿನ ಲೇಖನಇಂತಹದ್ದೊಂದು ಸೆಕ್ಸ್ ಟಿಪ್ಸ್ ಕೊಟ್ಟರೆ ನಂಬಬೇಡಿ!
ಮುಂದಿನ ಲೇಖನಕಾಮಾಸಕ್ತಿ ವೃದ್ಧಿಸುವ ಕೆಲವು ನೈಸರ್ಗಿಕ ಆಹಾರಗಳು