ಮನೆ ಮನರಂಜನೆ ಮಾ.31ಕ್ಕೆ ‘ಸ್ಟಾಕರ್’ ಕನ್ನಡ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮಾ.31ಕ್ಕೆ ‘ಸ್ಟಾಕರ್’ ಕನ್ನಡ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

0

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಳಿ ಐದಾರು ವರ್ಷಗಳ ಕಾಲ ಕೆಲಸ ಮಾಡಿ ಅನುಭವ ಇರುವ ಕಿಶೋರ್ ಭಾರ್ಗವ್ ನಿರ್ದೇಶನದ ಕನ್ನಡ ಸಿನಿಮಾ ‘ಸ್ಟಾಕರ್’ ಮಾರ್ಚ್ 31ಕ್ಕೆ 30 ಸ್ಕ್ರೀನ್ ಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ

ಸ್ಟಾಕರ್’ ಸಿನಿಮಾದ ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಕಿಶೋರ್ ಭಾರ್ಗವ್ ಅವರು ಈ ಹಿಂದೆ ಸೈಕೋ ಎನ್ನುವ ತೆಲುಗು ಸಿನಿಮಾ‌ ನಿರ್ದೇಶನ ಮಾಡಿದ್ದರು.

ಸ್ಟಾಕರ್ ಸಿನಿಮಾದಲ್ಲಿ ‘ಬೆಳದಿಂಗಳ ಬಾಲೆ’ ಸುಮನ್ ನರ್ಗಕರ್, ರಾಮ್, ಐಶ್ವರ್ಯ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಮುಂತಾದವರು ನಟಿಸಿದ್ದಾರೆ.

ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸ್ಟಾಕರ್ ಸಿನಿಮಾವನ್ನು, ಎಸ್ ಎಂ ಎಲ್  ಪ್ರೊಡಕ್ಷನ್ಸ್ , ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್ ನಡಿ ಎಂ ಎನ್ ವಿ ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ನಿರ್ಮಾಣ ಮಾಡಿದ್ದಾರೆ.

ಹಿಂದಿನ ಲೇಖನಉಕ್ರೇನ್ ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಮುಂದಿನ ಲೇಖನಪಾರ್ವತಮ್ಮ ರಾಜ್‍ ಕುಮಾರ್, ಪುನೀತ್ ರಾಜ್‍ ಕುಮಾರ್ ಹೆಸರಲ್ಲಿ ಚಿನ್ನದ ಪದಕ ಘೋಷಿಸಿದ ಅಶ್ವಿನಿ