ಮನೆ ರಾಜ್ಯ ವಾಹನ ಚಾಲನಾ ತರಬೇತಿ ಶುಲ್ಕ ಹೆಚ್ಚಳ: ಜನವರಿ 1 ರಿಂದ ಪರಿಷ್ಕೃತ ದರ ಜಾರಿ

ವಾಹನ ಚಾಲನಾ ತರಬೇತಿ ಶುಲ್ಕ ಹೆಚ್ಚಳ: ಜನವರಿ 1 ರಿಂದ ಪರಿಷ್ಕೃತ ದರ ಜಾರಿ

0
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ವಾಹನ ಚಾಲನಾ ತರಬೇತಿ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದ್ದು, ಡ್ರೈವಿಂಗ್ ಸ್ಕೂಲ್ ಮಾಲೀಕರ ಒಂದು ದಶಕದ ಬೇಡಿಕೆಯನ್ನು ಈಡೇರಿಸಿದೆ.

ಕಾರುಗಳ ಬೆಲೆ ಗಗನಕ್ಕೆ ಏರಿದೆ, ಸಾರಿಗೆ ಇಲಾಖೆ ಕೂಡ ದರ ಹೆಚ್ಚಳ ಮಾಡಿದೆ, ಮಕ್ಕಳ ಸ್ಕೂಲ್ ಬಾಡಿಗೆ ಕಟ್ಟಲು ಆಗ್ತಿಲ್ಲ, ಕೆಲಸಗಾರರಿಗೆ ಸಂಬಳ ಕೊಡಲು ಆಗ್ತಿಲ್ಲ, ಎಂದು ರಾಜ್ಯ ಸಾರಿಗೆ ಇಲಾಖೆಯ ಮುಂದೆ ಡ್ರೈವಿಂಗ್ ಸ್ಕೂಲ್ ಮಾಲೀಕರು ನೋವು ತೊಡಿಕೊಂಡಿದ್ದರು. ಈ ಹಿನ್ನಲೆ ಸಾರಿಗೆ ಇಲಾಖೆ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದೆ.

ಪರಿಷ್ಕೃತ ದರ ಜನವರಿ 1ರಿಂದ ಜಾರಿ

ಚಾಲನಾ ತರಬೇತಿಯ ಪರಿಷ್ಕೃತ ಶುಲ್ಕ 2024ರ ಜನವರಿ 1ರಿಂದಲೇ ಜಾರಿಗೆ ಬರಲಿದೆ.

ಮೋಟಾರ್ ಸೈಕಲ್ ಈ ಹಿಂದೆ 2,200 ರೂ. ಇದ್ದುದನ್ನು ಈಗ 3,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಆಟೋರಿಕ್ಷಾಗಳ ಚಾಲನಾ ತರಬೇತಿಗೆ 3000 ರೂ. ಇದ್ದುದನ್ನು 4000 ರೂ.ಗೆ ಹೆಚ್ಚಿಸಲಾಗಿದೆ. ಲಘು ಮೋಟಾರ್ ​ಗಳಿಗೆ 4000 ರೂ. ಇದ್ದುದನ್ನು 7000 ರೂ.ಹೆ ಏರಿಕೆ ಮಾಡಲಾಗಿದೆ. ಸಾರಿಗೆ ವಾಹನಗಳ ತರಬೇತಿ ದರವನ್ನು 6000 ರೂ.ನಿಂದ 9000 ರೂ.ಗೆ ಪರಿಷ್ಕರಿಸಲಾಗಿದೆ.

ನಿಗದಿಗಿಂತ ಹೆಚ್ಚು ಶುಲ್ಕ ಪಡೆದರೆ ಕಠಿಣ ಕ್ರಮ

ಕೆಲವು ವಾಹನ ಚಾಲನಾ ತರಬೇತಿ ಶಾಲೆಗಳು ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುತ್ತಿದ್ದು, ಅಂತಹ ಚಾಲನಾ ತರಬೇತಿ ಶಾಲೆಗಳ ಮೇಲೆ‌ ಕ್ರಮ ಜರುಗಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಪರಿಷ್ಕೃತ ದರ ಪಟ್ಟಿಗಿಂತ ಹೆಚ್ಚಿನ ಶುಲ್ಕ ಪಡೆಯುವುದು ಕಂಡು ಬಂದಲ್ಲಿ ಅಂತಹ ಚಾಲನಾ ತರಬೇತಿ ಶಾಲೆಗಳ ಮೇಲೆ ಕಠಿಣ ಕ್ರಮ ಜರಿಗಿಸಿಸುವುದರ ಜೊತೆಗೆ ಯಾವುದೇ ಪರವಾನಿಗೆ ಪಡೆಯದೇ ನಡೆಸುತ್ತಿರುವ ಅನಧಿಕೃತ ವಾಹನ ತರಬೇತಿ ಶಾಲೆಗಳ ಪತ್ತೆಗೂ ಇಲಾಖೆ ಮುಂದಾಗಿದೆ.

ಹಿಂದಿನ ಲೇಖನಹನೂರು: ಮಧ್ಯರಾತ್ರಿ ಶಾಲೆಗೆ ನುಗ್ಗಿ ಆಹಾರ ಪದಾರ್ಥ ಸೇವಿಸಿದ ಕರಡಿ
ಮುಂದಿನ ಲೇಖನಅಕ್ರಮ ವಿದ್ಯುತ್ ತಂತಿ ಸ್ಪರ್ಶ: ಕಾಡಾನೆ ಸಾವು