ಮನೆ ರಾಜ್ಯ ಗೋಖಲೆ ಸಂಸ್ಥೆಯಲ್ಲಿ ಆರೋಗ್ಯ ಜಾಗೃತಿ ಉಪನ್ಯಾಸ ಸರಣಿ..!

ಗೋಖಲೆ ಸಂಸ್ಥೆಯಲ್ಲಿ ಆರೋಗ್ಯ ಜಾಗೃತಿ ಉಪನ್ಯಾಸ ಸರಣಿ..!

0

ಬೆಂಗಳೂರು : ನಗರದ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ (GIPA) ಮತ್ತು ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಜಂಟಿಯಾಗಿ ಹಮ್ಮಿಕೊಂಡಿದ್ದ ಐದು ದಿನಗಳ ‘ಸಾರ್ವಜನಿಕ ಆರೋಗ್ಯ ಜಾಗೃತಿ ಉಪನ್ಯಾಸ ಸರಣಿ’ ಯಶಸ್ವಿಯಾಗಿ ಮುಕ್ತಾಯಗೊಂಡಿತು.

​ಏಪ್ರಿಲ್ 30 ರಿಂದ ಮೇ 4 ರವರೆಗೆ ನಡೆದ ಈ ವಿಶೇಷ ಸರಣಿಯಲ್ಲಿ, KSCASI ನ ಡಾ. ಎಚ್ ವಿ ಶಿವರಾಮ್, SSB ಅಧ್ಯಕ್ಷ ಡಾ. ಸುನಿಲ್ ಕುಮಾರ್, ಕಾರ್ಯದರ್ಶಿ ಡಾ. ವಿಕ್ರಂ ಬಿಳಿಗಿರಿ ಹಾಗೂ ಹಲವು ಖ್ಯಾತ ಶಸ್ತ್ರಚಿಕಿಸ್ತಕರು, ತಜ್ಞರು, ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಿದರು.

ಪ್ರಥಮ ಚಿಕಿತ್ಸೆ, ಕ್ಯಾನ್ಸರ್ ತಡೆಗಟ್ಟುವಿಕೆ, ಜೀವನಶೈಲಿ ಬದಲಾವಣೆ, ಹರ್ನಿಯಾ ಮತ್ತು ಆಧುನಿಕ ಲೇಸರ್ ಶಸ್ತ್ರಚಿಕಿತ್ಸೆಗಳ ಕುರಿತು ಉಪನ್ಯಾಸಗಳು ನಡೆದವು. ಈ ​ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯರು, “ಆಧುನಿಕ ಕಾಲಘಟ್ಟದಲ್ಲಿ ಕಾಯಿಲೆಗಳು ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಮುನ್ನೆಚ್ಚರಿಕೆ ವಹಿಸುವುದು ಮತ್ತು ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಶೀಘ್ರ ಗುಣಮುಖರಾಗಲು ಸಹಕಾರಿ” ಎಂದು ತಿಳಿಸಿದರು.

ಪ್ರತಿಯೊಂದು ಸೆಷನ್ ನಂತರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರಿಂದ ನೇರವಾಗಿ ಸಲಹೆ ಪಡೆದರು. ​ಗೋಖಲೆ ಸಂಸ್ಥೆಯ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಹಲವು ಗಣ್ಯರು ಮತ್ತು ವೈದ್ಯಕೀಯ ಕ್ಷೇತ್ರದ ಪ್ರತಿನಿಧಿಗಳು ಈ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.