ಮನೆ ಕಾನೂನು ಡಿ.6,7 ಮತ್ತು 8ರಂದು ದತ್ತ ಜಯಂತಿಗೆ ಹೈಕೋರ್ಟ್ ಅನುಮತಿ

ಡಿ.6,7 ಮತ್ತು 8ರಂದು ದತ್ತ ಜಯಂತಿಗೆ ಹೈಕೋರ್ಟ್ ಅನುಮತಿ

0

ಬೆಂಗಳೂರು: ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ದತ್ತಪೀಠದಲ್ಲಿ‌ ಡಿ.6,7 ಮತ್ತು 8ರಂದು ದತ್ತ‌ ಜಯಂತಿ‌ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದೆ.

ಪ್ರಕರಣದ‌ ಕುರಿತ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ‌ಈ ಆದೇಶ ನೀಡಿದೆ.

ಈಗಾಗಲೇ ನಿರ್ವಹಣಾ ಸಮಿತಿ ರಚಿಸಲಾಗಿದೆ. ಹಿಂದೂ-ಮುಸ್ಲಿಂ ಸದಸ್ಯರ ಸಮಿತಿಯಿಂದ ಅರ್ಚಕ, ಮುಜಾವರ್ ನೇಮಕ ಆಗಿದೆ. ಪ್ರತಿ ದಿನ ಎರಡೂ ಸಮುದಾಯದವರೂ‌ ಪೂಜೆ ನಡೆಸುತ್ತಿದ್ದಾರೆ. ಹೀಗಾಗಿ ‌ದತ್ತ ಜಯಂತಿ‌ ಆಚರಣೆಗೆ ಅನುಮತಿ ನೀಡಬೇಕು ಸರ್ಕಾರದ ಮನವಿ‌ ಮಾಡಿತ್ತು.

ಹಿಂದಿನ ಲೇಖನಶ್ರದ್ಧಾ ವಾಲಕರ್‌ ಹತ್ಯೆ ಪ್ರಕರಣ: ತಪ್ಪೊಪ್ಪಿಕೊಂಡ ಅಫ್ತಾಬ್
ಮುಂದಿನ ಲೇಖನಜಮೀನು ಸರ್ವೆಗೆ ಅಧಿಕಾರಿಗಳು ಬರುತ್ತಾರೆಂಬ ವದಂತಿ: ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ