ಮನೆ ರಾಜ್ಯ ಜಮೀನು ಸರ್ವೆಗೆ ಅಧಿಕಾರಿಗಳು ಬರುತ್ತಾರೆಂಬ ವದಂತಿ: ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ

ಜಮೀನು ಸರ್ವೆಗೆ ಅಧಿಕಾರಿಗಳು ಬರುತ್ತಾರೆಂಬ ವದಂತಿ: ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ

0

ಮೈಸೂರು: ಮೈಸೂರು-ಕುಶಾಲನಗರ ನಡುವಿನ ರೈಲು ಮಾರ್ಗದ ಕಾಮಗಾರಿಗೆ ಜಮೀನು ಸರ್ವೇ ಮಾಡಲು ಅಧಿಕಾರಿಗಳು ಬರಲಿದ್ದಾರೆ ಎಂಬ ವದಂತಿ ಜಿಲ್ಲೆಯ ಜನರ ನಿದ್ದೆಗೆಡಿಸಿದ್ದು, ಚಿಕ್ಕ ಬೀಚನಹಳ್ಳಿ ಗ್ರಾಮಸ್ಥರು ಸಂಸದ ಪ್ರತಾಪಸಿಂಹನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಹಾಗೂ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಹುಣಸೂರು ತಾಲೂಕು ಚಿಕ್ಕ ಬೀಚನಹಳ್ಳಿ ಗ್ರಾಮಸ್ಥರು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರತಾಪ್ ಸಿಂಹ ಅವರು ಬೇರೆ ಕಡೆ ಹೋಗುತ್ತಿದ್ದ ರೈಲ್ವೆ ಮಾರ್ಗವನ್ನು ನಮ್ಮ ಜಮೀನು ಕಡೆ ತಿರುಗಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರು, ಉದ್ಯಮಿಗಳ ಪ್ರಭಾವದ ಒತ್ತಡಕ್ಕೆ ಮಣಿದು, ಮೈಸೂರು ಕುಶಾಲನಗರ ರೈಲು ಮಾರ್ಗವನ್ನು ಎರಡು ಸಲ ಬದಲಾವಣೆ ಮಾಡಿದ್ದಾರೆ. ಈಗ ನಮ್ಮ ಜಮೀನಿನ ಮೇಲೆ ಹಾದು ಹೋಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈಗ ಅರ್ಧ ಎಕರೆ, ಹತ್ತು ಗುಂಟೆ ಜಮೀನು ಇರುವ ನಮ್ಮಂಥ ಬಡ ರೈತರ ಮುಂದಿನ ಜೀವನದ ಪಾಡೇನು?. ಇದ್ದ ಸ್ವಲ್ಪ ಜಮೀನನ್ನು ಕಿತ್ತುಕೊಂಡರೆ, ನಾವೆಲ್ಲ ಎಲ್ಲಿಗೆ ಹೋಗಬೇಕು. ನಾವು ಪ್ರಾಣ ಕೊಟ್ಟೇವು ಆದರೆ ಜಮೀನು ಮಾತ್ರ ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಹಿಂದಿನ ಲೇಖನಡಿ.6,7 ಮತ್ತು 8ರಂದು ದತ್ತ ಜಯಂತಿಗೆ ಹೈಕೋರ್ಟ್ ಅನುಮತಿ
ಮುಂದಿನ ಲೇಖನಪ್ರೇಮಿಗಳ ಜಗಳ ಕೊಲೆಯಲ್ಲಿ ಅಂತ್ಯ