ಮನೆ ಸುದ್ದಿ ಜಾಲ ‘ಅಲ್ಲಾಹು ಅಕ್ಬರ್​’  ಘೋಷಣೆ ಕೂಗಿದ್ದಕ್ಕೆ ಐಫೋನ್‌, ಸ್ಮಾರ್ಟ್‌ವಾಚ್‌ ಗಿಫ್ಟ್‌!

‘ಅಲ್ಲಾಹು ಅಕ್ಬರ್​’  ಘೋಷಣೆ ಕೂಗಿದ್ದಕ್ಕೆ ಐಫೋನ್‌, ಸ್ಮಾರ್ಟ್‌ವಾಚ್‌ ಗಿಫ್ಟ್‌!

0

ಮಂಡ್ಯ: ‘ಅಲ್ಲಾಹು ಅಕ್ಬರ್​’ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಮಹಾರಾಷ್ಟ್ರ ರಾಜ್ಯದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶನ್ ಸಿದ್ದಿಕ್ ಭೇಟಿ ನೀಡಿ, ಐಫೋನ್​, ಸ್ಮಾರ್ಟ್ ವಾಚ್ ಉಡುಗೊರೆ ನೀಡಿದ್ದಾರೆ.

ಕೇಸರಿ ಶಾಲು ಧರಿಸಿದ್ದ ನೂರಾರು ವಿದ್ಯಾರ್ಥಿಗಳ ಮುಂದೆ ವಿದ್ಯಾರ್ಥಿನಿ ಮುಸ್ಕಾನ್ ಧಾರ್ಮಿಕ ಘೋಷಣೆ ಕೂಗಿದ್ದರು. ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ನಿವಾಸಕ್ಕೆ ಭೇಟಿ ಕೊಟ್ಟ ಶಾಸಕ ಜೀಶನ್ ಸಿದ್ದಿಕ್ ಕುಟುಂಬಸ್ಥರಿಗೆ ಧೈರ್ಯ ಹೇಳಿ, ಅವರ ಜೊತೆ ಇರುವ ಭರವಸೆ ನೀಡಿದರು.

ನಂತರ ಮಾತನಾಡಿದ ಶಾಸಕ, ಈ ಬಗ್ಗೆ ನನಗೆ ಮಾಧ್ಯಮಗಳಿಂದ ಗೊತ್ತಾಯ್ತು. ಆಗ ಬಹಳ ಗರ್ವ ಅನಿಸಿತು. ಅಷ್ಟು ಜನ ಎದುರಿದ್ದರೂ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಅಂತಾ ಕೂಗಿದ್ದಾರೆ. ಹಿಜಾಬ್ ಹಾಕಿಕೊಳ್ಳೋದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ದನಿ ಎತ್ತಿದ್ದಾರೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಜನರು ಹೆಮ್ಮೆ ಪಡುತ್ತಿದ್ದಾರೆ. ಎಲ್ಲಾ ಮಹಿಳೆಯರು ಈ ವಿದ್ಯಾರ್ಥಿನಿ ರೀತಿ ಧೈರ್ಯದಿಂದ ಸಮಾಜವನ್ನು ಎದುರಿಸಬೇಕು ಎಂದು ಹೇಳಿದರು.

ಹಿಂದಿನ ಲೇಖನಹಿಜಾಬ್ ವಿವಾದ: ಹೈಕೋರ್ಟ್ ನ ಮಧ್ಯಂತರ ಆದೇಶ ಪ್ರಕಟ
ಮುಂದಿನ ಲೇಖನಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳ ಷಡ್ಯಂತ್ರ: ಸಚಿವ ಬಿ.ಸಿ.ನಾಗೇಶ್