ಮನೆ ರಾಜಕೀಯ ಹಿಜಾಬ್ ವಿವಾದ: ಮುಸ್ಲಿಂ ಶಾಸಕರಿಂದ ಸಿಎಂ ಭೇಟಿ

ಹಿಜಾಬ್ ವಿವಾದ: ಮುಸ್ಲಿಂ ಶಾಸಕರಿಂದ ಸಿಎಂ ಭೇಟಿ

0

ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಇಂದುಕಾಂಗ್ರೆಸ್​ ಮುಸ್ಲಿಂ ಶಾಸಕರು ಸಿಎಂ ಬಸವರಾಜ ಬೊಮ್ಮಾಯಿರವರನ್ನು ಸಿಎಂ ಅವರ ರೇಸ್​ಕೋರ್ಸ್​ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿ, ಹಿಜಾಬ್ ವಿವಾದವನ್ನು ಆದಷ್ಟು ಶೀಘ್ರ ಶಾಂತಿಯುತವಾಗಿ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಮುಂದಿನ ತಿಂಗಳು ಮಂಡನೆಯಾಗಲಿರುವ ರಾಜ್ಯ ಬಜೆಟ್​ನಲ್ಲಿ ಅಲ್ಪಸಂಖ್ಯಾತರಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.  

 ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯು ಟಿ ಖಾದರ್, ಕಳೆದ ಎರಡು ವರ್ಷಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಿಕ್ಷಣ ಮತ್ತು ಸಬಲೀಕರಣ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಕಡಿತ ಮಾಡಲಾಗಿದೆ. ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ಸಮಾನವಾಗಿ ಹಣ ಹಂಚಿಕೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದರು. 

 ಸಿಎಂನ್ನು ಭೇಟಿಯಾದವರಲ್ಲಿ ಶಾಸಕರಾದ ಯು ಟಿ ಖಾದರ್, ಎನ್​​.ಎ.ಹ್ಯಾರಿಸ್​, ತನ್ವೀರ್​ ಸೇಠ್​, ಜಮೀರ್​ ಅಹ್ಮದ್ ಖಾನ್​​, ಸಲೀಂ ಅಹಮದ್ , ರಿಸ್ವಾನ್ ಅರ್ಷದ್, ಖನೀಜ್ ಫಾತಿಮಾ ಸೇರಿ ಹಲವರಿದ್ದರು.

ಹಿಂದಿನ ಲೇಖನನಿಯಮಾನುಸಾರ ಮದ್ಯದ  ಅಂಗಡಿಗಳಿಗೆ ಪರವಾನಗಿ: ಸಚಿವ ಕೆ.ಗೋಪಾಲಯ್ಯ
ಮುಂದಿನ ಲೇಖನಮೈಸೂರು ಪಾಲಿಕೆ ಮೇಯರ್ ಪಟ್ಟಕ್ಕೆ ಲೆಕ್ಕಾಚಾರ ಆರಂಭ