ಮನೆ ಸುದ್ದಿ ಜಾಲ ನಿಯಮಾನುಸಾರ ಮದ್ಯದ  ಅಂಗಡಿಗಳಿಗೆ ಪರವಾನಗಿ: ಸಚಿವ ಕೆ.ಗೋಪಾಲಯ್ಯ

ನಿಯಮಾನುಸಾರ ಮದ್ಯದ  ಅಂಗಡಿಗಳಿಗೆ ಪರವಾನಗಿ: ಸಚಿವ ಕೆ.ಗೋಪಾಲಯ್ಯ

0

ಬೆಂಗಳೂರು: ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ನಿಯಮಾನುಸಾರವೇ  ಸರ್ಕಾರಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿಧಾನಸಭೆಗಿಂದು ತಿಳಿಸಿದರು.

ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಕುಣಿಗಲ್ ಕ್ಷೇತ್ರದಲ್ಲಿ 5 ಎಂಎಸ್ ಐ ಎಲ್ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ ಎಂದರು.

ಶಾಸಕರು ಮತ್ತು ಮಹಿಳೆಯರು ಮದ್ಯದ ಅಂಗಡಿ ಬೇಡ ಎಂದ ಕಡೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಯಾವುದೇ ಹ‌ಂತದಲ್ಲೂ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಉತ್ತರಿಸಿದರು.

ಹಿಂದಿನ ಲೇಖನಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರಸ್ತೆ ದುರಸ್ತಿಗೆ ಕ್ರಮ: ಗೋವಿಂದ ಕಾರಜೋಳ
ಮುಂದಿನ ಲೇಖನಹಿಜಾಬ್ ವಿವಾದ: ಮುಸ್ಲಿಂ ಶಾಸಕರಿಂದ ಸಿಎಂ ಭೇಟಿ