ಮನೆ ಕಾನೂನು ಹೈಕೋರ್ಟ್​​ನಲ್ಲಿ ಹಿಜಾಬ್ ವಿವಾದ ವಿಚಾರಣೆ: ರುದ್ರಾಕ್ಷಿ, ಮೂಗುತಿ ಬಗ್ಗೆಯೂ ಗಹನ ಚರ್ಚೆ

ಹೈಕೋರ್ಟ್​​ನಲ್ಲಿ ಹಿಜಾಬ್ ವಿವಾದ ವಿಚಾರಣೆ: ರುದ್ರಾಕ್ಷಿ, ಮೂಗುತಿ ಬಗ್ಗೆಯೂ ಗಹನ ಚರ್ಚೆ

0

ಬೆಂಗಳೂರು:  ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಇಂದು ಇಂದು ನಡೆದ ವಾದ-ಪ್ರತಿವಾದದಲ್ಲಿ ರುದ್ರಾಕ್ಷಿ, ಮೂಗುತಿ ಧಾರಣೆ ಚರ್ಚೆಗೆ ಬಂದವು.

ಉಡುಪಿಯ ಕಾಲೇಜಿನಲ್ಲಿ  ಹಿಜಾಬ್​ ಧರಿಸಿ ತರಗತಿಗೆ ಹಾಜರಾಗುವುದಕ್ಕೆ ನಿರ್ಬಂಧ ಹೇರಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಸಲ್ಲಿಸಿರುವ ರಿಟ್​ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್​​ ತ್ರಿಸದಸ್ಯ ಪೀಠ ನಡೆಸುತ್ತಿದ್ದು, ಇಂದು  ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳ ಪೀಠ ಮುಂದಿನ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಿದೆ.

ಶಿಕ್ಷಣ ಕಾಯ್ದೆ ಬಂದಿರುವುದು ಹಿಜಾಬ್ ನಿರ್ಬಂಧ ಹೇರಲು ಅಲ್ಲ ಎಂದು ವಾದ ಶುರು ಮಾಡಿದ ಅರ್ಜಿದಾರರ ಪರ ವಕೀಲ ದೇವದತ್​​ ಕಾಮತ್​, ನಾನು ಶಾಲೆಗೆ ಹೋಗುವಾಗ ರುದ್ರಾಕ್ಷಿ ಹಾಕುತ್ತಿದ್ದೆ. ಅದು ಧಾರ್ಮಿಕ ಗುರುತಲ್ಲ, ಅದು ನನ್ನ ನಂಬಿಕೆ. ಅದಕ್ಕೆ ಯಾವುದೇ ಧಾರ್ಮಿಕ ಆಚರಣೆ ನಿರ್ಬಂಧವಿಲ್ಲ ಎಂದರು.
ವಾದ ಮುಂದುವರೆಸಿದ ಕಾಮತ್​, ಸೌತ್ ಆಫ್ರಿಕಾದ ಪ್ರಕರಣವೊಂದನ್ನು ಉಲ್ಲೇಖಿಸಿದರು. ಪ್ರಕರಣದ ಬಗ್ಗೆ ವಿವರಿಸಿದ ವಕೀಲರು,  ಹಿಂದೂ ಯುವತಿ ಒಬ್ಬರು ಮೂಗುತಿ ಧರಿಸುವ ವಿಚಾರವಾಗಿ ಅರ್ಜಿ ಸಲ್ಲಿಸಿದ್ದರು. ಮೂಗುತಿ ಧರಿಸಲು ನಾವು ಪರ್ಮಿಟ್ ಮಾಡಲ್ಲ ಎಂದು ಶಾಲೆ ಹೇಳಿತ್ತು. ಸಾವಿರಾರು ವರ್ಷಗಳಿಂದ ಮುಗಿನ ನತ್ತು ಧರಿಸುವ ಆಚರಣೆ ಇದೆ. ಸಮವಸ್ತ್ರ ಶಾಲೆಯಲ್ಲಿ ಧರಿಸೋದು ಮುಖ್ಯ, ಮೂಗುತಿ ಹಾಕೋ ಸ್ವಾತಂತ್ರ್ಯ ಮನೆಯಲ್ಲಿ ಅನ್ನೋ ವಾದವಾಗಿತ್ತು. ಮೂಗು ಬೊಟ್ಟಿಗೆ 5000 ಸಾವಿರ ವರ್ಷಗಳ ಇತಿಹಾಸವಿದೆ. ಶಾಲೆ ಹೊರಗೆ ಮೂಗು ಬೊಟ್ಟು ಧರಿಸಬಹುದು ಎಂದು ದಕ್ಷಿಣ ಆಫ್ರಿಕಾ ವಾದ ಮಂಡಿಸಿತ್ತು. ದಕ್ಷಿಣ ಭಾರತ ಸಂಪ್ರದಾಯ ಹೀಗಾಗಿ ಧರಿಸಲು ಅವಕಾಶ ನೀಡಲು ಹುಡುಗಿ ಮನವಿ ಮಾಡಿದ್ದರು. ಸಂಪ್ರದಾಯವಾಗಿದ್ದರೆ ಅದಕ್ಕೆ ಅಡ್ಡಿಪಡಿಸಬಾರದು. ಈ ರೀತಿಯ ಆಚರಣೆ ಮತ್ತು ಪಾಲನೆಯನ್ನು ನಾವು ನಂಬಿಕೆ ಉಳ್ಳ ವ್ಯಕ್ತಿಯ ದೃಷ್ಟಿಕೋನದಿಂದ ನೋಡಬೇಕು ಎಂದು ಕಾಮತ್​ ವಾದ ಮಂಡಿಸಿದರು.

ಮತ್ತೊಬ್ಬರ ನಂಬಿಕೆಗೆ ಆಸ್ಪದ ಕಲ್ಪಿಸಬೇಕು:

ತಮಿಳುನಾಡಿನಲ್ಲಿ ಸುನಾಲಿ ಜನಾಂಗ ಇದೆ. ಅವರ ಆಚರಣೆಯಂತೆ ಯುವತಿ ಮೂಗುತಿ ಹಾಕುತ್ತಾರೆ.ಮೂಗುತಿ ಹಾಕೋದು ಹಿಂದೂ ಧರ್ಮದ ಆಚರಣೆ ಅನ್ನೋದು ಸ್ಪಷ್ಟವಾಗಿ ಸಂವಿಧಾನದ ಪೀಠವೂ ಆದೇಶ ನೀಡಿತು.  ಸುನಾಲಿ ಅನ್ನೋದು ದಕ್ಷಿಣ ಭಾರತದ ತಮಿಳುನಾಡಿನ ಆಚರಣೆ. ಈ ಪ್ರಕರಣ ಯಾವ ಪ್ರಮಾಣದಲ್ಲಿ ಸಹಿಷ್ಣತೆ ತರಬೇಕು ಮತ್ತು ಯಾವ ಪ್ರಮಾಣದಲ್ಲಿ ಮತ್ತೊಬ್ಬರ ನಂಬಿಕೆಗೆ ಆಸ್ಪದ ಕಲ್ಪಿಸಬೇಕು ಎಂದು ಹೇಳುತ್ತದೆ. ಅಲ್ಲಿನ ಸ್ಕೂಲ್, ಇತರರು ಇಷ್ಟ ಬಂದಂತೆ ಧರಿಸುತ್ತಾರೆ ಅನ್ನೋ ಆತಂಕ ವ್ಯಕ್ತಪಡಸಿತ್ತು. ಅದೇ ರೀತಿ ಇಲ್ಲಿ ಸಮಾನವಾದ ಅಂಶಗಳು ಇಲ್ಲಿಯೂ ಕೇಳಿ ಬರ್ತಿವೆ. ಅದು ಕೇಸರಿ ಶಾಲು ಧರಿಸುವ ವಿಚಾರವಾಗಿ ಎದ್ದಿದೆ ಎಂದರು.
ಇಲ್ಲಿ ಸಮವಸ್ತ್ರ ಧರಿಸುವುದಿಲ್ಲ ಅನ್ನೋ ಪ್ರಶ್ನೆಯೇ ಇಲ್ಲ. ಯೂನಿಫಾರಂ ಧರಿಸುವುದರ ಬಗ್ಗೆ ಆಯ್ಕೆಯೂ ಇಲ್ಲ. ಅದರಂತೆ ಇಲ್ಲಿ ಯೂನಿಪಾರಂ ಜೊತೆ ಹಿಜಾಬ್ ಧರಿಸುತ್ತೇವೆ. ಕೇವಲ ಸಣ್ಣ ಬದಲಾವಣೆಯ ಅವಶ್ಯಕತೆಯಿದೆ ಅಷ್ಟೇ. ಇದು ಸಂವಿಧಾನಿಕ ಪ್ರಶ್ನೆ ಹೇಳುವ ಪ್ರಕರಣವೇ ಅಲ್ಲ. ಹಿಜಾಬ್ ವಿಚಾರದಲ್ಲಿ ಮಕ್ಕಳು ಶಿಸ್ತು ಉಲ್ಲಂಘಿಸಲ್ಲ. ಶಾಲೆಯ ಸಮವಸ್ತ್ರದ ಜೊತೆಗೆ ಅದೇ ಬಣ್ಣದ ಸ್ಕ್ರಾಬ್ ಧರಿಸಿದ್ದಾರೆ. ಸರ್ಕಾರದ ಆದೇಶದವರೆಗೂ ಹೀಗೆ ಮುಂದುವರೆದಿದೆ. ಅಂತಿಮವಾಗಿ ಅಲ್ಲಿ ಸುನಾಲಿ ಮೂಗುತಿ ಧರಿಸಿ 2 ವರ್ಷ ಕಳೆದ ಮೇಲೆ ನಿರ್ಧಾರವಾಗಿತ್ತು. ಆಕೆ ನೋಸ್ ರಿಂಗ್ ಧರಿಸುವುದು ಯಾವುದೇ ತೊಂದರೆ ಇಲ್ಲ ಎಂದು ತೀರ್ಪು ಬಂತು. ಶಾಲೆ ಇದನ್ನು ಫ್ಯಾಷನ್ ಸಿಂಬಲ್ ಅಂತ ವಾದಿಸಿತ್ತು ಎಂದು ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಹಿಂದಿನ ಲೇಖನಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ: ಸಚಿವ ಅಶ್ವತ್ಥನಾರಾಯಣ
ಮುಂದಿನ ಲೇಖನ`ಸವಾಲ್’ ಪತ್ರಿಕೆಯ ವರದಿ ಫಲಶ್ರುತಿ: ಆರೋಪಿಗಳಿಗೆ ಜೈಲೇ ಖಾಯಂ