ಮನೆ ಸುದ್ದಿ ಜಾಲ ದೇಶಾದ್ಯಂತ ಹಿಜಾಬ್​ ನಿಷೇಧಿಸಬೇಕು: ಸಾಕ್ಷಿ ಮಹಾರಾಜ್

ದೇಶಾದ್ಯಂತ ಹಿಜಾಬ್​ ನಿಷೇಧಿಸಬೇಕು: ಸಾಕ್ಷಿ ಮಹಾರಾಜ್

0

ಉನ್ನಾವೋ  : ದೇಶದಾದ್ಯಂತ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಕಾನೂನು ಜಾರಿಗೆ ತರಬೇಕು ಎಂದು ಉನ್ನಾವೋದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಹಿಜಾಬ್​ ವಿಚಾರ ಚುನಾವಣೆಯಿಂದ ಮುನ್ನೆಲೆಗೆ ಬಂದರೂ ಈ ವಿಚಾರ ಜನರಿಗೆ ಉತ್ತರವಾಗಿದೆ. ನನ್ನ ಪ್ರಕಾರ, ದೇಶಾದ್ಯಂತ ಹಿಜಾಬ್ ನಿಷೇಧಿಸಲು ಕಾನೂನು ರೂಪಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.

ಹಿಜಾಬ್​ ವಿಚಾರವಾಗಿ ಈಗಾಗಲೇ ಕರ್ನಾಟಕ ಹೈಕೋರ್ಟ್​​ನ ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿರುವ ಅಡ್ವೊಕೇಟ್​​ ಜನರಲ್​​​​​ ಹಿಜಾಬ್​​ ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.

ಜನಿಕವಾಗಿ ಹಿಜಾಬ್​ ಧರಿಸುವುದಕ್ಕೆ ಯಾವುದೇ ನಿಬಂಧನೆ ಇಲ್ಲ. ಆದರೆ ಶಾಲಾ ಕೊಠಡಿಯೊಳಗೆ ಇದಕ್ಕೆ ಅನುಮತಿ ಇಲ್ಲ. ಶಾಲಾ ಆಡಳಿತ ಮಂಡಳಿಗಳ ನಿಯಮಾವಳಿಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

ಹಿಂದಿನ ಲೇಖನಇಡಿಯಿಂದ ಮಹಾರಾಷ್ಟ್ರ ಸಚಿವ ನಾಯಕ ನವಾಬ್ ಮಲಿಕ್ ಬಂಧನ
ಮುಂದಿನ ಲೇಖನಸಚಿವ ಕೆ.ಸಿ.ನಾರಾಯಣಗೌಡರ ಬೇಜವಬ್ದಾರಿತನ ಖಂಡಿಸಿ ತಮಟೆ ಚಳವಳಿ