ಮನೆ ಆರೋಗ್ಯ ಕೊರೊನಾ ಪ್ರಕರಣಗಳ ಏರಿಕೆ: ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ ತಮಿಳುನಾಡು ಸರ್ಕಾರ

ಕೊರೊನಾ ಪ್ರಕರಣಗಳ ಏರಿಕೆ: ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ ತಮಿಳುನಾಡು ಸರ್ಕಾರ

0

ಚೆನ್ನೈ: ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ಮಾಸ್ಕ್‌ ಧರಿಸುವುದನ್ನು ತಮಿಳುನಾಡು ಸರ್ಕಾರ ಶನಿವಾರದಿಂದ ಕಡ್ಡಾಯಗೊಳಿಸಿದೆ.

ಆಸ್ಪತ್ರೆಗಳಿಂದಲೇ ಸೋಂಕು ಆರಂಭವಾಗುತ್ತದೆ. ಹೀಗಾಗಿ ಸುಮಾರು 11,300 ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸ್‌ ಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗೆ ಭೇಟಿ ನೀಡುವವರು ಏ.1ರಿಂದ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್‌ ತಿಳಿಸಿದ್ದಾರೆ.

ಸದ್ಯ ಒಮೈಕ್ರಾನ್‌ ಉಪ ತಳಿ ಎಕ್ಸ್‌’ಬಿಬಿ ಮತ್ತು ಬಿಎ.2 ತಮಿಳುನಾಡಿನಲ್ಲಿ ಮಾತ್ರವಲ್ಲ ಭಾರತ ಸೇರಿದಂತೆ ಜಗತ್ತಿನಾದ್ಯಂತ ಹರಡುತ್ತಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ರಾಜ್ಯದಲ್ಲಿ 123 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಹಿಂದಿನ ಲೇಖನಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ಒದಗಿಸಲು ಸೂಚಿಸಿದ್ದ ಸಿಐಸಿ ಆದೇಶ ವಜಾಗೊಳಿಸಿದ ಗುಜರಾತ್ ಹೈಕೋರ್ಟ್: ಕೇಜ್ರಿವಾಲ್’ಗೆ ದಂಡ
ಮುಂದಿನ ಲೇಖನಲಿಂಗಪರಿವರ್ತಿತ ಮಹಿಳೆಯೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಹಾರಕ್ಕೆ ಅರ್ಹಳು: ಬಾಂಬೆ ಹೈಕೋರ್ಟ್