ಮನೆ ಮನೆ ಮದ್ದು ಜೇನುಹುಳು ಕಚ್ಚಿದ್ದಕ್ಕೆ ಮನೆ ಮದ್ದು

ಜೇನುಹುಳು ಕಚ್ಚಿದ್ದಕ್ಕೆ ಮನೆ ಮದ್ದು

0

ಈರುಳ್ಳಿಯನ್ನು ಗಂಧದ ಕಲ್ಲಿನ ಮೇಲೆ ತೆಗೆದು ಲೇಪಿಸಿದರೆ ನೋವು ಶಮನವಾಗುವುದು.

ಕೀಟದ ಕಡಿತದಿಂದಾಗುವ ತುರಿಕೆ:

ಕೀಟ ಕಡಿದ ಜಾಗದಲ್ಲಿ ಅಡುಗೆಯ ಉಪ್ಪಿನ ಪುಡಿ ಹರಡಿ ತಿಕ್ಕುವುದರಿಂದ ತುರಿಕೆ ನಿವಾರಣೆಯಾಗುವುದು.

ಚೇಳು ಕಡಿತಕ್ಕೆ:

•       ತುಳಸಿಯ ಗಿಡದ ಹಸಿ ಬೇರನ್ನು ತೆಗೆದು ಗಂಧದಗಿರಿ ಈ ಗಂಧವನ್ನು ಚೀಳುಕುಟುಕಿದ ಜಾಗಕ್ಕೆ ಲೇಪಿಸಿ ಚೇಳಿನ ವಿಷ ಇಳಿದು ಆರಾಮ ವಾಗುವುದು.

•       ನಿಂಬೆಹಣ್ಣಿನ ಬೀಜಗಳನ್ನು ನುಣ್ಣಗೆ ಅರೆದು ಚೇಳು ಕುಡುಕಿದ ಭಾಗದ ಮೇಲೆ ಲೇಪಿಸಿ ಶಾಖ ಕೊಡಿ. ಉರಿ ಮತ್ತು ಚಳುಕು ನಿವಾರಣೆಯಾಗುವುದು.

•       ಹೊಸದಾದ ವೀಳ್ಯದ ಸುಣ್ಣವನ್ನು ಅಷ್ಟೇ ಪ್ರಮಾಣದ ಹುಣಸೆ ಹಣ್ಣಿನೊಂದಿಗೆ ಸೇರಿಸಿ ಚೆನ್ನಾಗಿ ಮಸಿಯಿರಿ ಆ ಪದಾರ್ಥವನ್ನು ಚೆಳು ಕಡೆದ ಜಾಗದ ಮೇಲಿಟ್ಟು ಬೆರಳಿನಿಂದ ಒತ್ತಿ ಹಿಡಿಯಿರಿ ಈ ಚಿಕಿತ್ಸೆಯಿಂದ ವಿಷದ ಪ್ರಭಾವ ಇಳಿದು ನೋವು ನಿವಾರಣೆಯಾಗುವುದು.

•       ಚೇಳು ಕಡಿದ ಜಾಗದಲ್ಲಿ ಒಂದೆರಡು ಹರಳು ಪೊಟಾಸಿಎಂ ಪರ್ಮ್ಯಾಂಗನೇಟ್ ಇಡಿ ಇದರ ಮೇಲೆ ಒಂದೆರಡು ತುತ್ತು ನಿಂಬೆಗಳಲ್ಲಿ ಉರಿ ಮತ್ತು ಚಳುಕು ನಿಲ್ಲುವುದು.

ಹಾವು ಕಡಿದಾಗ:

•       ಒಂದು ಹರಳೆಲೆಯನ್ನು ಏಳೆಂಟು ಕರಿಮೆಣಸು ಕಾಳುಗಳೊಂದಿಗೆ ಕೂಡಿಸಿ ನುಣ್ಣುಗೆ ಅರೆಯಿರಿ ಅರೆದ ಪದಾರ್ಥಗಳನ್ನು ರೋಗಿಗೆ ನುಂಗಿಸಿ ಹೀಗೆ ಮಾಡಿದಾಗ ವಾಂತಿಯಾಗುವುದರಿಂದ ನಂಜಿನ ತೀವ್ರತೆ ಕಡಿಮೆಯಾಗುವುದು. ಗಂಟೆಗೆ ಬಂದಾವರ್ತಿಯಂತೆ ಮೂರರಿಂದ ನಾಲ್ಕು ಬಾರಿ ಈ ಚಿಕಿತ್ಸೆಯನ್ನು ಪುನರಾವರ್ತಿಸುವುದು ಅಗತ್ಯ.

•       ಸ್ವ ಮೂತ್ರದ ಚಿಕಿತ್ಸೆಯಿಂದ ಹಾವಿನ ವಿಷ ನಿವಾರಿಸಬಹುದು. ಪ್ರಾರಂಭಕ್ಕೆ ಎರಡು ಬಟ್ಟಲು ಮೂತ್ರವನ್ನು ರೋಗಿಗೆ ಕುಡಿಸಿ, 15 ನಿಮಿಷಗಳ ನಂತರ ಮತ್ತೆ ಒಂದು ಬಟ್ಟಲು ಮೂತ್ರವನ್ನು ರೋಗಿಗೆ ಕುಡಿಸಿ.

 (ಸೂಚನೆ: ಚೇಳು ಕುಡಿತಕ್ಕೆ ಇದರ ಅರ್ಧದಷ್ಟು ಪ್ರಮಾಣ ಮೂತ್ರ ಕುಡಿಸಿದರೆ ಸಾಕು)

•       ಹಾವು ಕಡಿದ ತಕ್ಷಣ, ಕಡಿದ ಜಾಗದಲ್ಲಿ ಹರಿತವಾದ ಚಾಕು ಅಥವಾ ಬ್ಲೇಡಿನಿಂದ ದೊಡ್ಡ ಗಾಯ ಮಾಡಿ, ಆನಂತರ ಗಾಯಕ್ಕೆ ಬಾಯಿ ಹಾಕಿ ಚೆನ್ನಾಗಿ ಸ್ವಚ್ಛವಾಗಿ ಬಾಯಿ ತೊಳೆದುಕೊಳ್ಳಿ.

( ಸೂಚನೆ: ಹಾವು ಕಡಿತಕ್ಕೆ ಮಾಡುವ ಯಾವುದೇ ಗ್ರಾಮೀಣ ಚಿಕಿತ್ಸೆ ಎಷ್ಟೇ ಉತ್ತಮವೆನಿಸಿದರು ಅನುಭವಿ ವೈದ್ಯರ ನೆರವು ಪಡೆಯುವುದು ಅತ್ಯಗತ್ಯ. ಕಡಿದ ಹಾವಿನ ಜಾತಿ ನಿರ್ದಿಷ್ಟವಾಗಿ ತಿಳಿದಿದ್ದರೆ ಚಿಕಿತ್ಸೆ ಸುಲಭವಾಗುವುದು ಒಂದು ವೇಳೆ ಹಾವನ್ನು ಪತ್ತೆ ಹಚ್ಚಿ ಕೊಂದು ಹಾಕಿದ್ದರೆ ಸತ್ತ ಹಾವನ್ನು ವೈದ್ಯರಿಗೆ ತೋರಿಸುವುದು ಲೇಸು)