ಓಮಿನಕಾಳು, ವಾದಕ್ಕಿ, ಓಮು ಎಂಬ ಹೆಸರಿನ ಸಾಂಬಾರ ಪದಾರ್ಥವಾಗಿದೆ. ಹಿಷಟ್ಸ್ ವೀಡ್ ಎಂಬುದು ಆಂಗ್ಲ ಹೆಸರು. ಅಜವಾಯನ, ಅಜಮೋದ, ವಾನಿ, ಬ್ರಹ್ಮದರ್ಭ, ಉಗ್ರಗಂಧಾ, ಯವಾನ್ಯ, ದೀಪ, ದೀಪ್ಯಕಾ, ಯವಸ್ಮಾಎಂಬಿತ್ಯಾದಿ ಸಂಸ್ಕೃತ ಹೆಸರುಗಳು. ಬಾರ್ಲಿಯಂತೆಯೇ ಹೋಮಕ್ಕೆ ಸಮೀಧೆಯಾಗಿ ಬಳಸುತ್ತಿದ್ದರು. ಹಾಗಾಗಿ ಇದಕ್ಕೆ ಬ್ರಹ್ಮಧರ್ಬಾ ಎಂಬ ಹೆಸರು ಮತ್ತು ಹಲವು ಹೆಸರುಗಳು ಬಂದಿದೆ.
ಬೀಜ ಬಿತ್ತಿ ಹೊಸ ಸಸಿ ಕೃಷಿ, ಮಾರ್ಗಶಿರ, ಪುಷ್ಯ ಮಾಸದಲ್ಲಿ ಹೆಚ್ಚಾಗಿ ಹೂ, ಅನಂತರ ಚಪ್ಪಟೆಬೀಜ. ಮೂರಡಿ ಸಸ್ಯದಲ್ಲಿ ಧನಿಯ ಎಲೆಯಂತೆ ಸಪೂರ ಸುವಾಸನೆ ಭರಿತ ಛತ್ರಿಯಾಕರ ಬಲಿಯುವ ಬೀಜ. ಎರಡು ಮೀಟರ್ ಗಾತ್ರ, ಕಂದು ಬಣ್ಣ, ವಿಶಿಷ್ಟ ಬಗೆಯ ಉಗ್ರಗಂಧವಿರುತ್ತದೆ. ಬೀಜದ ನಡುವೆ ಪುಟ್ಟ ಗಂಟು ಮೇಲಿನ ಗೋಲಾರದಲ್ಲಿ ಐದು ಗೀರುಗಳಿರುತ್ತವೆ.
ಅಜೀರ್ಣ, ಹಸಿವೆ ಕುಗ್ಗಿದಾಗ ಬಳಕೆಯಿಂದ ಲಾಭವಿದೆ. ಬಲಕರ, ಕ್ರಿಮಿನಾಶಕ, ಪದೇಪದೇ ಮರುಕಳಿಸುವ ಕೆಮ್ಮು ನೆಗಡಿ ತಡೆಯುತ್ತದೆ. ಭೇಧಿ, ಹೊಟ್ಟೆ ನೋವು, ಹೊಟ್ಟೆ ಒಬ್ಬರ, ವಾಂತಿ, ಭೇದಿಗಳಲ್ಲಿ ಓಮಿನ ಪಾತ್ರ ಗುಣನೀಯವಾಗಿದೆ
ಔಷಧೀಯ ಗುಣಗಳು :-
* ಹಳೆ ಕೆಮ್ಮು ಇದ್ದವರು, ಎದೆಯಲ್ಲಿ ಗಟ್ಟಿಯಾಗಿ ಕಫ ಸಂಗ್ರಹವಾದರೆ ಓಮಿನಪುಡಿಯನ್ನು ನೆಕ್ಕಿದರೆ ಕಫವನ್ನು ಹೊರ ತೆಗೆಯುತ್ತದೆ. ಕೆಮ್ಮಿನಲ್ಲಿ ಸುಧಾರಣೆ ಆಗುತ್ತದೆ.
* ಮಧ್ಯ ವ್ಯಸನಿಗಳಿಗೆ ಅವರ ಚಟ ಬಿಡಿಸಲು ಓಮವನ್ನು ಚಪ್ಪರಿಸಲು ಕೊಟ್ಟರೆ, ಕುಡಿತದ ಚಟವೂ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.
* ಹಳೆಯ ಉಬ್ಬಸ ರೋಗಿಗೆ ಕೆಮ್ಮು, ಕಫ ನಿವಾರಣೆಗೆ ಬಿಸಿನೀರಿಗೆ ಪುಡಿ ಹಾಕಿ ಸೇವಿಸಿರಿ. ಉಬ್ಬಸರೋಗಿಗೆ ಬೀಜ ಪುಡಿಯ ಘಾಟು ಸೇವನೆಯಿಂದ ಉತ್ತಮ ಲಾಭವಿದೆ.
* ಹೊಟ್ಟೆ ನೋವಿನ ಉಪಶಮನಕ್ಕೆ ನೆಲ್ಲಿಪುಡಿ, ಯುವಕ, ಆರ, ಓಮದ ಪುಡಿ ಕುಡಿಸಿ ಸೇವಿಸಿದರೆ ವಿಶೇಷ ಲಾಭ.
* ಓಮದ ಎಲೆಯ ರಸವನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಕ್ರಿಮಿ ಜಂತುಗಳಿಂದ ಪರಿಹಾರ.
* ಉರಿಯೂತ, ಸಂದುನೋವು, ಉಬ್ಬಸ, ಹೊಟ್ಟೆ ನೋವಿದ್ದಲ್ಲಿ ಆಯಾ ಭಾಗಕ್ಕೆ ಬಿಸಿಬಿಸಿ ಓಮ ಶಾಖ ಕೊಟ್ಟರೆ ಹಿತಕರ.